Wednesday, June 3, 2026
Homeತಾಜಾ ಸುದ್ದಿಬಿಗ್‌ ಬಾಸ್‌ ಸೀಸನ್‌ -10ರ ಸ್ಪರ್ಧಿ ಡ್ರೋನ್ ಪ್ರತಾಪ್ ಸಿನಿಮಾರಂಗಕ್ಕೆ ಎಂಟ್ರಿ..!; ನಾಯಕ ನಟನಾಗಿ ಮಿಂಚುತ್ತಾರ...

ಬಿಗ್‌ ಬಾಸ್‌ ಸೀಸನ್‌ -10ರ ಸ್ಪರ್ಧಿ ಡ್ರೋನ್ ಪ್ರತಾಪ್ ಸಿನಿಮಾರಂಗಕ್ಕೆ ಎಂಟ್ರಿ..!; ನಾಯಕ ನಟನಾಗಿ ಮಿಂಚುತ್ತಾರ ಪ್ರತಾಪ್

- Advertisement -
- Advertisement -

ಬೆಂಗಳೂರು: ಕನ್ನಡದ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಬಿಗ್‌ ಬಾಸ್‌ ಸೀಸನ್‌ -10ರ ಮೂಲಕ ಮಿಂಚಿದ್ದ ಡ್ರೋನ್‌ ಪ್ರತಾಪ್‌ ಇದೀಗ ಸಿನಿಮಾರಂಗಕ್ಕೂ ಕಾಲಿಡುತ್ತಿದ್ದಾರೆ.

ತನ್ನ ಮೇಲಿರುವ ಆರೋಪಗಳಿಗೆ ಬಿಗ್ ಬಾಸ್ ವೇದಿಕೆಯ ಮೂಲಕ ತನ್ನ ಮಾನವೀಯ ವ್ಯಕ್ತಿತ್ವದಿಂದಲೇ ಉತ್ತರಿಸಿ, ಜನರ ಮನಸ್ಸು ಗೆದ್ದು ಕಾರ್ಯಕ್ರಮದಲ್ಲಿ ರನ್ನರ್‌ ಅಪ್‌ ಆದವರು ಡ್ರೋನ್ ಪ್ರತಾಪ್. ನಂತರದಲ್ಲಿ ಸಿಕ್ಕ ಬಹುಮಾನದ ಹಣವನ್ನು ಫುಡ್‌ ಡೆಲಿವೆರಿ ಮಾಡುವ ಬಡ ಯುವಕನಿಗೆ  ಎಲೆಕ್ಟ್ರಿಕ್‌ ಸ್ಕೂಟರ್‌, ಜನುಮನ ದಿನದಂದು ಅಜ್ಜಿ ಸೇರಿದಂತೆ ಕೆಲ ಮಂದಿಗೆ ಕಣ್ಣಿನ ಆಪರೇಷನ್‌ ಹಾಗೂ ಬಡ ಕುಟುಂಬಕ್ಕೆ ರೇಷನ್‌ ಸೇರಿದಂತೆ ಹಲವು ಮಾನವೀಯ ಕಾರ್ಯಕ್ಕೆ ಬಳಸಿ ಶಭಾಷ್ ಗಿರಿಯನ್ನು ಪಡೆದಿದ್ದರು.

ಇದೀಗ ಅವರು ಡ್ರೋನ್ ಪ್ರತಾಪ್ ಸಿನಿಮಾ ಕ್ಷೇತ್ರಕ್ಕೆ ಕೂಡ ಕಾಲಿಡುತ್ತಿದ್ದು, ನಾಯಕ ನಟನಾಗಿ ಅಭಿನಯಿಸುತ್ತಿದ್ದಾರೆ.  ಇನ್ನು ಈ ಕುರಿತಂತ ಅವರು ‘ಒಂದು ಸಿನಿಮಾಕ್ಕೆ ನಾಯಕ ನಟನಾಗಿ ಅಭಿನಯಿಸುತ್ತಿದ್ದೇನೆ. ಇದೆಲ್ಲ ನಿಮ್ಮೆಲ್ಲರ ಆರ್ಶೀವಾದ. ನನ್ನ ಬ್ಯುಸಿನೆಸ್‌ ಜತೆಗೆ ಸಿನಿಮಾರಂಗಕ್ಕೂ ಕಾಲಿಡುತ್ತಿದ್ದೇನೆ,’ ಎಂದು ಮಂಡ್ಯದ ಕೆ.ಆರ್ ಪೇಟೆಯ ಹನುಮಾನ್‌ ದೇವಸ್ಥಾನದ ಉದ್ಘಾಟನೆಗೆ ಅತಿಥಿಯಾಗಿ ಬಂದ ಸಮಯದಲ್ಲಿ ತಿಳಿಸಿದ್ದಾರೆ. ಇದಕ್ಕೆ ಪೂರಕವೆಂಬಂತೆ 

ದೇವರ ಮುಂದೆ ಸಿನಿಮಾಕ್ಕೆ ಸಹಿ ಹಾಕಿರುವುದನ್ನು ವಿಡಿಯೋದಲ್ಲಿ ತೋರಿಸಲಾಗಿದೆ.  ಆದರೆ ಯಾವ ಸಿನಿಮಾವೆಂಬುವುದು ಇನ್ನಷ್ಟೇ ತಿಳಿಯಬೇಕಿದೆ.

- Advertisement -

Latest News

error: Content is protected !!