ಮಂಗಳೂರು: ರೋಟರಿ ಕ್ಲಬ್‌ನ ಮಂಗಳೂರು ಸೆಂಟ್ರಲ್ ಘಟಕವು ಇದೇ 24ರಂದು ಉರ್ವದ ಕೆನರಾ ಪ್ರೌಢಶಾಲೆಯ ಆವರಣದಲ್ಲಿ ‘ರೋಟರಿ ಚಿಣ್ಣರ ಉತ್ಸವ’ ಕ್ರೀಡಾ ಮತ್ತು ಸಾಂಸ್ಕೃತಿಕ ಸ್ಪರ್ಧಾ ಕೂಟವನ್ನು ಏರ್ಪಡಿಸಿದೆ.
ಈ ಕುರಿತಂತೆ ರೋಟರಿ ಕ್ಲಬ್‌ನ ಮಂಗಳೂರು ಸೆಂಟ್ರಲ್ ಘಟಕದ ಅಧ್ಯಕ್ಷ ಬ್ರಾಯಾನ್ ಪಿಂಟೊ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ಈ ಉತ್ಸವವನ್ನು ಬೆಳಿಗ್ಗೆ 9 ಗಂಟೆಗೆ ಸಂಸದ ಕ್ಯಾ.ಬ್ರಿಜೇಶ್ ಚೌಟ ಅವರು ಉದ್ಘಾಟಿಸುವರು. ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ ಹಾಗೂ ರೋಟರಿ ಜಿಲ್ಲೆ 3181ರ ವಲಯ-2 ಸಹಾಯಕ ಗವರ್ನರ್ ಕೃಷ್ಣ ಹೆಗ್ಡೆ ಪಾಲ್ಗೊಳ್ಳಲಿದ್ದಾರೆ’ ಎಂದರು.
ಉತ್ಸವದಲ್ಲಿ ಕ್ರೀಡಾ ಸ್ಪರ್ಧೆ, ಗಾನ, ನೃತ್ಯ, ನಾಟಕ ಮೊದಲಾದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು, ಉತ್ಸವದಲ್ಲಿ ಮಕ್ಕಳ ರಕ್ಷಣೆ ಮತ್ತು ಆರೈಕೆ ಕೇಂದ್ರಗಳಲ್ಲಿ ಆಶ್ರಯಪಡೆದ 550 ವಿದ್ಯಾರ್ಥಿಗಳು ಪಾಲ್ಗೊಳ್ಳಲಿದ್ದಾರೆ’ ಎಂದರು.
ಕಾರ್ಯಕ್ರಮದ ಸಮಾರೋಪವು ಸಂಜೆ 5ಕ್ಕೆ ನಡೆಯಲಿದ್ದು, ರೋಟರಿ ಜಿಲ್ಲೆ 3181ರ ಜಿಲ್ಲಾ ಗವರ್ನರ್ ವಿಕ್ರಮ್ ದತ್ತ ಹಾಗೂ ಮಂಗಳೂರು ಸೆಂಟ್ರಲ್ ರೋಟರಿ ಫೌಂಡೇಷನ್ ಅಧ್ಯಕ್ಷ ಪ್ರೇಮನಾಥ ಕುಡ್ವ ಭಾಗವಹಿಸಲಿದ್ದಾರೆ ಎಂದು ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಕ್ಲಬ್‌ನ ರಾಜೇಶ್ ಸೀತಾರಾಂ, ರೊನಾಲ್ಡ್ ಮೆಂಡೋನ್ಸ, ಕರಣ್ ಜೈನ್, ಅಕ್ಷಯ್ ಬಿ.ರೈ, ರಾಜ್ ಗೋಪಾಲ್ ರೈ, ರಾಜೇಶ್ ಶೆಟ್ಟಿ ಉಪಸ್ಥಿತರಿದ್ದರು.


