- Advertisement -
![]()
- Advertisement -
ಬೆಳ್ತಂಗಡಿ: ಹೆಬ್ರಿ ತಾಲೂಕಿನ ಕಬ್ಬಿನಾಲೆ ಕಾಡಿನಲ್ಲಿ ನಕ್ಸಲ್ ವಿಕ್ರಂ ಗೌಡ ಎನ್ ಕೌಂಟರ್ ಹಿನ್ನೆಲೆಯಲ್ಲಿ ಬೆಳ್ತಂಗಡಿ ತಾಲೂಕಿನ ಕುತ್ಲೂರಿನಲ್ಲಿ ಎಎನ್ ಎಫ್ ಕೂಂಬಿಂಗ್ ನಡೆದಿದೆ.
ವೇಣೂರು ಪೊಲೀಸ್ ಠಾಣೆ ವ್ಯಾಪ್ತಿಯ ಕುತ್ಲೂರು ನಕ್ಸಲ್ ಪೀಡಿತ ಪ್ರದೇಶವಾಗಿರುವ ಹಿನ್ನೆಲೆಯಲ್ಲಿ ನಕ್ಸಲ್ ನಿಗ್ರಹ ಪಡೆ ಇಂದು ಕೂಂಬಿಂಗ್ ಚುರುಕುಗೊಳಿಸಿದೆ.ನಿನ್ನೆ ವಿಕ್ರಂ ಗೌಡ ಎನ್ ಕೌಂಟರ್ ನಡೆದ ವೇಳೆ ತಪ್ಪಿಸಿಕೊಂಡಿದ್ದ ನಕ್ಸಲ್ ಸುಂದರಿ ಮನೆ ಕೂಡಾ ಕುತ್ಲೂರಿನಲ್ಲೇ ಇರುವ ಹಿನ್ನೆಲೆಯಲ್ಲಿ ಎಎನ್ ಎಫ್ ಕೂಂಬಿಂಗ್ ನಡೆಸಿದೆ.
ನಿನ್ನೆ ಸಂಜೆ ವೇಳೆಗೆ ಉಡುಪಿ ಜಿಲ್ಲೆಯ ಹೆಬ್ರಿ ತಾಲೂಕಿನ ಕಬ್ಬಿನಾಲೆ ಕಾಡಿನಲ್ಲಿ ನಕ್ಸಲ್ ತಂಡದ ಮುಖಂಡ ವಿಕ್ರಂ ಗೌಡನನ್ನು ನಕ್ಸಲ್ ನಿಗ್ರಹ ಪಡೆ ಎನ್ ಕೌಂಟರ್ ನಡೆಸಿತ್ತು.
- Advertisement -


