Friday, June 5, 2026
Homeಅಪರಾಧಹಿರಿಯ ನಾಗರಿಕರ ಆರೈಕೆಗೆ ನೇಮಕವಾಗಿದ್ದ ಹೋಂ ನರ್ಸ್‌ ಚಿನ್ನ, ವಜ್ರಾಭರಣ ಕದ್ದು ಪರಾರಿ

ಹಿರಿಯ ನಾಗರಿಕರ ಆರೈಕೆಗೆ ನೇಮಕವಾಗಿದ್ದ ಹೋಂ ನರ್ಸ್‌ ಚಿನ್ನ, ವಜ್ರಾಭರಣ ಕದ್ದು ಪರಾರಿ

- Advertisement -
- Advertisement -

ಉಡುಪಿ: ಇಲ್ಲಿನ ಬಡಗುಬೆಟ್ಟುವಿನ ನಿವಾಸಿ ಪ್ರಸಾದ್‌ ಅವರ ಮನೆಯಲ್ಲಿ ಹಿರಿಯ ನಾಗರಿಕರ ಆರೈಕೆಗೆ ನೇಮಕಗೊಂಡಿದ್ದ ಹೋಂ ನರ್ಸ್‌ ನಗದು ಹಾಗೂ ಆಭರಣ ಕದ್ದು ಪರಾರಿಯಾಗಿದ್ದಾನೆ.

ಪರ್ಕಳದ ದೀಕ್ಷಾ ಹೋಂ ಹೆಲ್ತ್ ಕೇರ್‌ ಮುಖೇನ ಸಿದ್ದಪ್ಪ ಕೆ. ಕೊಡ್ಲಿ ಅವರನ್ನು ಬಡಗುಬೆಟ್ಟು ನಿವಾಸಿ ಪ್ರಸಾದ್‌ ಅವರು ಹೋಮ್‌ ನರ್ಸ್‌ ಆಗಿ ನೇಮಕ ಮಾಡಿಕೊಂಡಿದ್ದರು.

ಸಿದ್ದಪ್ಪ ಕೆ. ಕೊಡ್ಲಿ ಅವರು ನ. 17ರಂದು ಬೆಳಗ್ಗೆ 9.15ರಿಂದ ಮಧ್ಯಾಹ್ನ 1.15ರ ಅವಧಿಯಲ್ಲಿ ಮನೆಯ ಹಜಾರದಲ್ಲಿರುವ ರ್ಯಾಕ್‌ ಮೇಲಿಟ್ಟಿದ್ದ 6 ಗ್ರಾಂ ತೂಕದ ಸುಮಾರು 43,800 ರೂ. ಮೌಲ್ಯದ ವಜ್ರದ ಒಂದು ಜೊತೆ ಕಿವಿ ಓಲೆ ಹಾಗೂ ಮಲಗುವ ಕೊಠಡಿಯ ಲಾಕರ್‌ನಲ್ಲಿ ಇಟ್ಟಿದ್ದ ಅಂದಾಜು 427 ಗ್ರಾಂ ತೂಕದ 31,17,100 ರೂ. ಮೌಲ್ಯದ ಚಿನ್ನ, ವಜ್ರಾಭರಣಗಳನ್ನು ಕಳವುಗೈದಿದ್ದಾರೆ ಎಂದು ಸಿದ್ದಪ್ಪ ಕೊಡ್ಲಿ ವಿರುದ್ಧ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!