Thursday, June 4, 2026
Homeಆರಾಧನಾಗೋ ಪೂಜೆ ಮಾಡಿ ಸಂಪ್ರದಾಯದಂತೆ ಮೇಯಲು ಬಿಟ್ಟ ಗೋವುಗಳು ಕಳವು

ಗೋ ಪೂಜೆ ಮಾಡಿ ಸಂಪ್ರದಾಯದಂತೆ ಮೇಯಲು ಬಿಟ್ಟ ಗೋವುಗಳು ಕಳವು

- Advertisement -
- Advertisement -

ಕೋಟ: ಗೋ ಪೂಜೆ ಮಾಡಿ ಸಂಪ್ರದಾಯದಂತೆ ಮೇವಿಗಾಗಿ ಬಿಟ್ಟ ನಾಲ್ಕು ಗೋವುಗಳಲ್ಲಿ ಎರಡು ಗೋವುಗಳನ್ನು ಕಳ್ಳರು ಕಾರಿನಲ್ಲಿ ಕದ್ದೊಯ್ದ ಘಟನೆ  ಕೋಟ ಪೊಲೀಸ್‌ ಠಾಣೆ ವ್ಯಾಪ್ತಿಯ ಹೊಂಬಾಡಿ-ಮುಂದಾಡಿಯಲ್ಲಿ ನಡೆದಿದೆ.

ಕಳವಾದ ಗೋವುಗಳು ಕೋಟ ನಿವಾಸಿ ಸುಧಾಕರ ಅವರದ್ದು ಎನ್ನಲಾಗಿದೆ.

ಸುಧಾಕರ ಅವರ ಒಂದೆರಡು ದಿನ ಹುಡುಕಾಡಿದ ಬಳಿಕವೂ, ಗೋವುಗಳು ಸಿಗದಿದ್ದಾಗ ಅಕ್ಕಪಕ್ಕದಲ್ಲಿದ್ದ ಸಿಸಿಟಿವಿ ಪರಿಶೀಲಿಸಿದ್ದಾರೆ. ನ.3ರಂದು ಬೆಳಗಿನ ಜಾವ  ಸಮೀಪದ ತಲ್ಮಕ್ಕಿಯ ಬಸ್‌ ನಿಲ್ದಾಣದ ಬಳಿ ಮಲಗಿದ್ದ ಎರಡು ದನಗಳನ್ನು 3 ಮಂದಿ ಕೆಂಪು ಬಣ್ಣದ ಕಾರಿನಲ್ಲಿ  ತುಂಬಿಸಿಕೊಂಡು ಹೋಗಿರುವುದು ಕಂಡುಬಂದಿದೆ.

ಈ ಕುರಿತಂತೆ ಸುಧಾಕರ ಅವರು ಕೋಟ ಪೊಲೀಸ್‌ ಠಾಣೆಗೆ ದೂರು ನೀಡಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.

- Advertisement -

Latest News

error: Content is protected !!