Friday, June 5, 2026
Homeಚಿಕ್ಕಮಗಳೂರುಹೆಬ್ಬೆ ಜಲಪಾತದಲ್ಲಿ ಈಜಲು ಹೋಗಿ ಜೀವ ಕಳೆದುಕೊಂಡ ಪ್ರವಾಸಿಗ

ಹೆಬ್ಬೆ ಜಲಪಾತದಲ್ಲಿ ಈಜಲು ಹೋಗಿ ಜೀವ ಕಳೆದುಕೊಂಡ ಪ್ರವಾಸಿಗ

- Advertisement -
- Advertisement -

ಚಿಕ್ಕಮಗಳೂರು: ಸ್ನೇಹಿತರ ಜೊತೆಗೂಡಿ ಹೆಬ್ಬೆ ಜಲಪಾತಕ್ಕೆ ಬಂದಿದ್ದ ಪ್ರವಾಸಿಗನೋರ್ವ ಜಲಪಾತದಲ್ಲಿ ಈಜಲು ಹೋಗಿ ಜೀವ ಕಳೆದುಕೊಂಡಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ಹೆಬ್ಬೆ ಜಲಪಾತದಲ್ಲಿ ಭಾನುವಾರ(ನ.3) ಸಂಭವಿಸಿದೆ.

ಛತ್ತಿಸಘಡದ ಮೂಲದ ಪ್ರವಾಸಿಗ ಅಮೀತ್ ಕುಮಾರ್(30)ಮೃತ ದುರ್ದೈವಿಯಾಗಿದ್ದಾನೆ.

ಈತ ಮೂಲತಃ ಛತ್ತಿಸ್ ಘಡದವನಾಗಿದ್ದು ಬೆಂಗಳೂರಿನಲ್ಲಿ ವಾಸವಾಗಿದ್ದ. ದೀಪಾವಳಿ ಹಿನ್ನೆಲೆ ಸಾಲು ಸಾಲು ರಜೆ ಇದ್ದ ಕಾರಣ ತನ್ನ ಸ್ನೇಹಿತರ ಜತೆ ಕೆಮ್ಮಣ್ಣು ಗುಂಡಿ ಸಮೀಪದ ಹೆಬ್ಬೆ ಜಲಪಾತಕ್ಕೆ ತೆರಳಿದ್ದ. ಈ ವೇಳೆ ನೀರಿನಲ್ಲಿ ಈಜಲು ಹೋಗಿ ನಿರುಪಾಲಾಗಿರುವ ಘಟನೆ ನಡೆದಿದೆ.

ಘಟನೆ ಬಗ್ಗೆ ಲಿಂಗದಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!