Wednesday, June 3, 2026
Homeಕರಾವಳಿನಿಮ್ಮ ಡಿಎನ್ಎ ಹಸಿರು ಇದ್ಯಾ, ಕೇಸರಿ ಇದ್ಯಾ ಅಂತ ಟೆಸ್ಟ್ ಮಾಡಿಸಬೇಕು; ಪೇಜಾವರ ಶ್ರೀಗಳನ್ನ ಪುಡಿ ರಾಜಕಾರಣಿಯೆಂದ ಬಿ.ಕೆ ಹರಿಪ್ರಸಾದ್ ಗೆ...

ನಿಮ್ಮ ಡಿಎನ್ಎ ಹಸಿರು ಇದ್ಯಾ, ಕೇಸರಿ ಇದ್ಯಾ ಅಂತ ಟೆಸ್ಟ್ ಮಾಡಿಸಬೇಕು; ಪೇಜಾವರ ಶ್ರೀಗಳನ್ನ ಪುಡಿ ರಾಜಕಾರಣಿಯೆಂದ ಬಿ.ಕೆ ಹರಿಪ್ರಸಾದ್ ಗೆ ಪೂಂಜ ತಿರುಗೇಟು  

- Advertisement -
- Advertisement -

ಮಂಗಳೂರು: ಸನಾತನ ಧರ್ಮದಲ್ಲಿ ಗುರು ಪರಂಪರೆಗೆ, ಗುರು ಮಠಕ್ಕೆ ವಿಶೇಷ ಗೌರವವಿದೆ. ಪೇಜಾವರ ಶ್ರೀಗಳನ್ನು ಪುಡಿ ರಾಜಕಾರಣಿ ಎಂದಿರುವ ಕಾಂಗ್ರೆಸ್ ಮುಖಂಡ ಬಿ.ಕೆ ಹರಿಪ್ರಸಾದ್ ಅವರಿಗೆ ತಾಕತ್ ಇದ್ರೆ ಮುಸಲ್ಮಾನ ಧರ್ಮ ಗುರುಗಳು, ಕ್ರೈಸ್ತ ಪಾದ್ರಿಗಳ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡುತ್ತಾರೆಯೇ? ಎಂದು ಬೆಳ್ತಂಗಡಿ ಬಿಜೆಪಿ ಶಾಸಕ ಹರೀಶ್ ಪೂಂಜ ತಿರುಗೇಟು ನೀಡಿದ್ದಾರೆ.

ಮಾಧ್ಯಮದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಪೂಂಜ ಅವರು, “ಕಾಂಗ್ರೆಸ್ ಮುಖಂಡ ಬಿ.ಕೆ ಹರಿಪ್ರಸಾದ್ ಅವರು ಪ್ರೇಜಾವರ ಶ್ರೀಗಳ ಕುರಿತು ಪುಡಿ ರಾಜಕಾರಣಿ ಹೇಳಿಕೆ ನೀಡಿದ್ದು, ಪುಡಿ ರಾಜಕಾರಣಿ ಯಾರು ಎಂದು ಮಲ್ಲೇಶ್ವರಂ ಏರಿಯಾದ ಗಲ್ಲಿ ಗಲ್ಲಿಗೆ ಗೊತ್ತಿದೆ. ಒಂದು ಚುನಾವಣೆ ಗೆಲ್ಲುವ ಯೋಗ್ಯತೆ ಇಲ್ಲದವರು. ಗಾಂಧಿ ಕುಟುಂಬದ ಆತ್ಮೀಯ ಎನ್ನುವುದನ್ನೇ ಬಂಡವಾಳ ಮಾಡಿಕೊಂಡು ಹಿಂಬಾಗಿಲ ರಾಜಕಾರಣ ಮಾಡುತ್ತಿರುವ ಹರಿಪ್ರಸಾದ್ ಅವರೇ ಪುಡಿ ರಾಜಕಾರಣಿ. ಇವರ ಡಿಎನ್ಎ ಹಸಿರು ಇದ್ಯಾ, ಕೇಸರಿ ಇದ್ಯಾ ಅಂತ ಟೆಸ್ಟ್ ಮಾಡಿಸಬೇಕು,” ಎಂದು ಟೀಕಿಸಿದ್ದಾರೆ. 

“ಬಿ.ಕೆ ಹರಿಪ್ರಸಾದ್ ಅವರ ಬಳಿ ರಾಜಕಾರಣದ ಯೋಗ್ಯತೆ ಇಲ್ಲ, ಚುನಾವಣೆಯಲ್ಲಿ ಗೆಲ್ಲುವ ಅರ್ಹತೆಯೂ ಇಲ್ಲ. ಜಾತಿ ಗಣತಿ ಬಗ್ಗೆ ಸ್ವಾಮೀಜಿಗಳ ಹೇಳಿಕೆ ಅವರ ವೈಯುಕ್ತಿಕ ಅಭಿಪ್ರಾಯ. ಪ್ರಜಾಪ್ರಭುತ್ವದ ಈ ಕಾಲದಲ್ಲಿ ಅಭಿಪ್ರಾಯವನ್ನು ಹೇಳುವಂತಹ ಸ್ವಾತಂತ್ರ್ಯ ಎಲ್ಲರಿಗೂ ಇದೆ. ಸ್ವಾಮೀಜಿ ಎಲ್ಲ ಜಾತಿಗಳನ್ನ ಮೀರಿ ಹಿಂದೂ ಸಮಾಜಕ್ಕೆ ಮಾರ್ಗದರ್ಶನ ನೀಡುವಂಥವರು,” ಎಂದು ಹರೀಶ್ ಪೂಂಜ ಅವರು ಅಕ್ರೋಶ ವ್ಯಕ್ತಪಡಿಸಿದ್ದಾರೆ. 

- Advertisement -

Latest News

error: Content is protected !!