Friday, June 5, 2026
Homeಅಪರಾಧಉಡುಪಿಯಲ್ಲಿ ವೇಶ್ಯಾವಾಟಿಕೆ, ಅವಧಿ ಮೀರಿ ಹೊಟೇಲ್‌ ವ್ಯವಹಾರ; ಪೊಲೀಸರಿಂದ ರಾತ್ರಿ ಕಾರ್ಯಾಚರಣೆ

ಉಡುಪಿಯಲ್ಲಿ ವೇಶ್ಯಾವಾಟಿಕೆ, ಅವಧಿ ಮೀರಿ ಹೊಟೇಲ್‌ ವ್ಯವಹಾರ; ಪೊಲೀಸರಿಂದ ರಾತ್ರಿ ಕಾರ್ಯಾಚರಣೆ

- Advertisement -
- Advertisement -

ಉಡುಪಿ: ಇಲ್ಲಿನ ವಿವಿಧೆಡೆ ವೇಶ್ಯಾವಾಟಿಕೆ ನಡೆಯುತ್ತಿರುವ ಬಗ್ಗೆ ಹಾಗೂ ಅವಧಿ ಮೀರಿ ಹೊಟೇಲ್‌ಗ‌ಳು ಕಾರ್ಯಾಚರಿಸುತ್ತಿರುವ ಬಗ್ಗೆ ಸಾರ್ವಜನಿಕರಿಂದ ದೂರು ಕೇಳಿ ಬಂದಿದ್ದು, ಈ ಹಿನ್ನೆಲೆಯಲ್ಲಿ ಉಡುಪಿ ನಗರ ಭಾಗದಲ್ಲಿ ಪೊಲೀಸರು ರಾತ್ರಿ ಕಾರ್ಯಾಚರಣೆ ನಡೆಸಿ ಎಚ್ಚರಿಕೆ ನೀಡಿದರು.

ಮುಖ್ಯವಾಗಿ ಹಳೆ ಕೆಎಸ್ಸಾರ್ಟಿಸಿ ಬಸ್‌ ನಿಲ್ದಾಣ, ನರ್ಮ್ ಬಸ್‌ ತಂಗುದಾಣ, ಸಿಟಿ, ಸರ್ವಿಸ್‌ ಬಸ್‌ ತಂಗುದಾಣದಲ್ಲಿ ಅನಗತ್ಯವಾಗಿ ಇದ್ದವರನ್ನು ತೆರಳುವಂತೆ ಸೂಚಿಸಲಾಯಿತು. ಜತೆಗೆ ಹೊಟೇಲ್‌ಗ‌ಳಿಗೂ ತೆರಳಿ ಎಚ್ಚರಿಕೆ ನೀಡಿದರು.

ಈ ಕಾರ್ಯಾಚರಣೆಯು ನಗರ ಠಾಣೆಯ ಪೊಲೀಸ್‌ ನಿರೀಕ್ಷಕ ಶ್ರೀಧರ ಸತಾರೆ ನೇತೃತ್ವದಲ್ಲಿ ನಡೆಯಿತು.

- Advertisement -

Latest News

error: Content is protected !!