Thursday, June 4, 2026
Homeಅಪರಾಧವಿಟ್ಲದಲ್ಲಿ ದಾಖಲೆಯಿಲ್ಲದೆ ಗೋ ಸಾಗಾಟ; ಮಾರಾಟ ಮಾಡಿದ ವ್ಯಕ್ತಿಯ ಮನೆಗೆ ಜಾನುವಾರು ವಾಪಸ್‌

ವಿಟ್ಲದಲ್ಲಿ ದಾಖಲೆಯಿಲ್ಲದೆ ಗೋ ಸಾಗಾಟ; ಮಾರಾಟ ಮಾಡಿದ ವ್ಯಕ್ತಿಯ ಮನೆಗೆ ಜಾನುವಾರು ವಾಪಸ್‌

- Advertisement -
- Advertisement -

ವಿಟ್ಲ: ಮಾಣಿಲದ ಬಜರಂಗ ದಳ ಕಾರ್ಯಕರ್ತರು ಕೇರಳಕ್ಕೆ ವಾಹನದ ಮೂಲಕ ಅಕ್ರಮವಾಗಿ ಜಾನುವಾರು ಸಾಗಾಟ ಮಾಡುತ್ತಿರುವ ಮಾಹಿತಿಯನ್ನು ತಿಳಿದು, ವಾಹನವನ್ನು ತಡೆದಿದ್ದು, ನಂತರದಲ್ಲಿ ವಿಟ್ಲ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಎರಡು ಜಾನುವಾರುಗಳನ್ನು ಸಾಕುವ ಉದ್ದೇಶದಿಂದ ವ್ಯಕ್ತಿಯೊಬ್ಬರಿಂದ ಖರೀದಿಸಿದ್ದಾರೆಂದು ಪೊಲೀಸರು ತನಿಖೆ ಮಾಡಿದಾಗ, ತಿಳಿದುಬಂದಿತ್ತು. ಆದರೆ ಸಾಗಾಟಕ್ಕೆ ಸೂಕ್ತ ಅನುಮತಿ ಪತ್ರ ಇರಲಿಲ್ಲ.ಆದುದರಿಂದ ಮಾರಾಟ ಮಾಡಿದ ವ್ಯಕ್ತಿಯ ಮನೆಗೆ ಜಾನುವಾರುಗಳನ್ನು ಕಳುಹಿಸಲಾಗಿದ್ದು, ಕಾನೂನಾತ್ಮಕವಾಗಿ ಸಂಪೂರ್ಣ ದಾಖಲೆಯೊಂದಿಗೆ ವಾಹನದಲ್ಲಿ ಸಾಗಾಟ ಮಾಡಲು ವಿಟ್ಲ ಪೊಲೀಸರು ಸೂಚಿಸಿದ್ದಾರೆ.

ಇನ್ನು ಈ ಬಗ್ಗೆ ಪ್ರಕರಣ ದಾಖಲಾಗಿಲ್ಲ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

- Advertisement -

Latest News

error: Content is protected !!