Friday, June 5, 2026
HomeUncategorizedಮನೆಗೆ ಬಂದ ಅಳಿಯನಿಗೆ ಅತ್ತೆಯಿಂದ 67 ತರಹ ಅಡುಗೆಯ ಭರ್ಜರಿ ಊಟ, ವೈರಲ್ ಆಗಿದೆ ಅತ್ತೆಯ...

ಮನೆಗೆ ಬಂದ ಅಳಿಯನಿಗೆ ಅತ್ತೆಯಿಂದ 67 ತರಹ ಅಡುಗೆಯ ಭರ್ಜರಿ ಊಟ, ವೈರಲ್ ಆಗಿದೆ ಅತ್ತೆಯ ಆತಿಥ್ಯದ ವಿಡಿಯೋ

- Advertisement -
- Advertisement -

ಹೈದರಾಬಾದ್: ಮನೆಗೆ ಅಳಿಯ ಬರ್ತಾನೆ ಅಂದ್ರೆ ಅತ್ತೆಯಂದಿರಿಗೆ ಏನೋ ಸಂಭ್ರಮ. ಅತ್ತೆಯ ಮನೆಯಲ್ಲಿ ಅಳಿಯನಿಗೆ ಭರ್ಜರಿ ಊಟದ ಆತಿಥ್ಯ ಅಂತೂ ಫಿಕ್ಸ್ ಆಗಿರುತ್ತೆ. ಇದೀಗ  ಹೈದರಾಬಾದ್ ನಲ್ಲಿ ಅತ್ತೆಯೊಬ್ಬರು ತಮ್ಮ ಮನೆಗೆ ಬಂದ ಅಳಿಯನ ಆತಿಥ್ಯಕ್ಕಾಗಿ ಮಾಡಿದ ಊಟದ ಮೆನುವಿನ ವಿಡಿಯೋ ಒಂದು ಸಿಕ್ಕಾಪಟ್ಟೆ ವೈರಲ್ ಆಗಿದೆ.

ಅಳಿಯನಿಗೋಸ್ಕರ 67 ವೈರೆಟಿ ಖಾದ್ಯಗಳನ್ನು ಮಾಡಿದ್ದಾರೆ ಈ ಅತ್ತೆ. ಹಾಗೇ ವೈಲ್ಕಂ ಡ್ರಿಕ್ ನಿಂದ ಆರಂಭವಾಗುವ ಈ ಊಟದ ಮೆನು 67 ಐಟಂಗಳವರೆಗೆ ಸಾಗುತ್ತದೆ. ಸ್ಟಾಟರ್ಸ್,ಚಾಟ್ಸ್, ಐಸ್ ಕ್ರೀಂ, ಎಲ್ಲವೂ ಇದರಲ್ಲಿದೆ. ಅಲ್ಲದೇ ವಿಡಿಯೋದಲ್ಲಿ ಎಲ್ಲಾ ಐಟಂಗಳನ್ನು ಅಷ್ಟೇ ಚೆನ್ನಾಗಿ ವಿವರಿಸಿದ್ದಾರೆ ಕೂಡ. ಜೊತೆಗೆ ಈ ಖಾದ್ಯಗಳನ್ನೆಲ್ಲಾ ವಿಡಿಯೋ ಮಾಡಿ ಟ್ರೈಲರ್ ಮಾಡಿ ಅದನ್ನು ಅಳಿಯನಿಗೆ ಕಳುಹಿಸಿದ್ದಾರೆ  ಈ ಅತ್ತೆ. ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದೆ. ಅದೇನೇ ಹೇಳಿ.. ಸಿಕ್ಕಿದ್ರೆ ಇಂತಹ ಅತ್ತೆ ಸಿಗ್ಬೇಕಲ್ವಾ?

- Advertisement -

Latest News

error: Content is protected !!