- Advertisement -
- Advertisement -
ಉಡುಪಿ: ಪೆಟ್ರೋಲ್ ಸೋರಿಕೆಯಾಗಿ ಪೆಟ್ರೋಲ್ ಬಂಕ್ ನಲ್ಲಿಯೇ ಸ್ಕೂಟರ್ ಗೆ ಬೆಂಕಿ ಹತ್ತಿಕೊಂಡ ಘಟನೆ ಉಡುಪಿಯಲ್ಲಿ ಸಂಭವಿಸಿದೆ.ಉಡುಪಿ ತಾಲೂಕಿನ ಚಿಟ್ಟಾಡಿಯಲ್ಲಿ ಪೆಟ್ರೋಲ್ ಬಂಕ್ ಒಂದರಲ್ಲಿ ಈ ಅವಘಡ ನಡೆದಿದೆ.
ಪೆಟ್ರೋಲ್ ಪಂಪ್ ನಿಂದ ಬಾಟಲಿಯಲ್ಲಿ ಪೆಟ್ರೋಲ್ ತುಂಬಿಸಿ ತಂದಿದ್ದ ವ್ಯಕ್ತಿ ಬಾಟಲಿಯನ್ನು ಸ್ಕೂಟರ್ ಡಿಕ್ಕಿಯ ಒಳಗೆ ಇರಿಸಿದ್ದರು. ಈ ವೇಳೆ ಬಾಟಲಿಯಲ್ಲಿದ್ದ ಪೆಟ್ರೋಲ್ ಸೋರಿಕೆಯಾಗಿ ಸ್ಕೂಟರ್ ನ ಇಂಜಿನ್ ಗೆ ಬೆಂಕಿ ಹೊತ್ತಿಕೊಂಡಿದೆ.
ಬೆಂಕಿ ಹೊತ್ತಿಕೊಂಡ ತಕ್ಷಣವೇ ಪೆಟ್ರೋಲ್ ಬಂಕ್ ಸಿಬ್ಬಂದಿ ಮತ್ತು ಸ್ಥಳೀಯರು ಜಾಗೃತರಾಗಿ ಬೆಂಕಿ ನಂದಿಸಿ ಸಂಭಾವ್ಯ ಅಪಾಯವನ್ನು ತಪ್ಪಿಸಿದ್ದಾರೆ.
ಬೆಂಕಿ ಅವಘಡ ಸಂಭವಿಸಿದ ಸ್ಥಳದ ಸಮೀಪದಲ್ಲಿಯೇ ಬಸ್, ಮತ್ತು ಇತರ ವಾಹನಗಳನ್ನು ನಿಲ್ಲಿಸಲಾಗಿತ್ತು.
- Advertisement -