Friday, June 27, 2025
HomeWorldಪ್ರಧಾನಿ ಮೋದಿಯ ಉಕ್ರೈನ್‌ ವಿಚಾರದ ನಿಲುವು ಹೊಗಳಿದ ರಷ್ಯಾ ಅಧ್ಯಕ್ಷ ಪುಟಿನ್

ಪ್ರಧಾನಿ ಮೋದಿಯ ಉಕ್ರೈನ್‌ ವಿಚಾರದ ನಿಲುವು ಹೊಗಳಿದ ರಷ್ಯಾ ಅಧ್ಯಕ್ಷ ಪುಟಿನ್

spot_img
- Advertisement -
- Advertisement -

ರಷ್ಯಾ: ಭಾರತ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ರಷ್ಯಾ ಅಧ್ಯಕ್ಷ ವ್ಲಾದಿಮಿರ್‌ ಪುಟಿನ್‌ ಬ್ರಿಕ್ಸ್‌ ಶೃಂಗದ ಮೈತ್ರಿ ದೇಶಗಳ ಕುರಿತು ಮಾತನಾಡುವ ಸಂದರ್ಭದಲ್ಲಿ ಹೊಗಳಿರುವುದಾಗಿ ವರದಿ ತಿಳಿಸಿದೆ.

ಬ್ರಿಕ್ಸ್‌ ಪಾತ್ರ ಮತ್ತು ಉಕ್ರೈನ್‌ ಯುದ್ಧ ಸೇರಿದಂತೆ ಭೌಗೋಳಿಕ ವಿಚಾರಗಳ ಬಗ್ಗೆ ವಿದೇಶಿ ಪತ್ರಕರ್ತರ ಜತೆ ನಡೆಸಿದ ಸಂವಹನದಲ್ಲಿ ವ್ಲಾದಿಮಿರ್ ಪುಟಿನ್‌ ಮಾತನಾಡಿರುವುದಾಗಿ ವರದಿ ವಿವರಿಸಿದೆ.

ಪುಟಿನ್ ಅವರು, ಬ್ರಿಕ್ಸ್‌ ಶೃಂಗ ಪಾಶ್ಚಾತ್ಯ ವಿರೋಧಿ ಸಂಘವಲ್ಲ. ಉಕ್ರೈನ್‌ ಯುದ್ಧದ ವಿಚಾರದಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ಸಮತೋಲನದ ನಿರ್ಧಾರದ ಬಗ್ಗೆ ಉಲ್ಲೇಖಿಸಿ ಈ ಕುರಿತಂತೆ ಶ್ಲಾಘಿಸಿದ್ದರು. ಹಾಗೆಯೇ ಆ ಸಂದರ್ಭದಲ್ಲಿ ಬ್ರಿಕ್ಸ್‌ ಮೈತ್ರಿ ಜತೆ ಸೇರಿಕೊಳ್ಳಲು ಹೊಸ ದೇಶಗಳಿಗೆ ಬಾಗಿಲು ತೆರೆದಿದೆ ಎಂದು ಪುಟಿನ್‌ ಈ ಸಂದರ್ಭದಲ್ಲಿ ಹೇಳಿದರು. ‌ಅಷ್ಟೇ ಅಲ್ಲ ಬ್ರಿಕ್ಸ್‌ ಮೈತ್ರಿ ಹೊಂದಿರದ ರಾಷ್ಟ್ರಗಳು ಕೂಡಾ ಆರ್ಥಿಕವಾಗಿ ಲಾಭ ಪಡೆಯಲಿವೆ ಎಂದು ತಿಳಿಸಿದ್ದಾರೆ.

- Advertisement -
spot_img

Latest News

error: Content is protected !!