Thursday, June 4, 2026
Homeಅಪರಾಧಬೆಳ್ಳಂಬೆಳಗ್ಗೆ ವಾಮಾಚಾರ ನಡೆಸಿರುವ ಘಟನೆ; ಬೆಚ್ಚಿ ಬಿದ್ದ ಸ್ಥಳೀಯರು

ಬೆಳ್ಳಂಬೆಳಗ್ಗೆ ವಾಮಾಚಾರ ನಡೆಸಿರುವ ಘಟನೆ; ಬೆಚ್ಚಿ ಬಿದ್ದ ಸ್ಥಳೀಯರು

- Advertisement -
- Advertisement -

ಮೂಡಿಗೆರೆ: ಇಲ್ಲಿನ ಹೆಡದಾಳು ಗ್ರಾಮದಲ್ಲಿ ಕಿಡಿಗೇಡಿಗಳ ಗುಂಪೊಂದು ಬೆಳ್ಳಂಬೆಳಗ್ಗೆ ವಾಮಾಚಾರ ನಡೆಸಿರುವ ಘಟನೆ ಬೆಳಕಿಗೆ ಬಂದಿದ್ದು, ಇದರಿಂದ ಸ್ಥಳೀಯರು ಆತಂಕಕ್ಕೆ ಈಡಾಗಿದ್ದಾರೆ.

ಕಿಡಿಗೇಡಿಗಳ ಗುಂಪೊಂದು ಶನಿವಾರ ಮುಂಜಾನೆ ಸುಮಾರು ಐದು ಗಂಟೆಯ ಸುಮಾರಿಗೆ ಹಡೆದಾಳು ಗ್ರಾಮದ ಮೂರೂ ರಸ್ತೆ ಕೂಡುವ ಜಾಗದಲ್ಲಿ ಬಾಳೆಎಲೆ ಮೇಲೆ ಹಸಿರು ಬಳೆ ಮೇಲೆ ಮಣ್ಣಿನ ಬೊಂಬೆ ಅಂದರೆ ಮಡಕೆಗೆ ಕಾಳಿ ರೂಪ ನೀಡಿ ವಾಮಾವಾರ ನಡೆಸಿದ್ದಾರೆ ಎನ್ನಲಾಗಿದೆ.

ವಾಮಾಚರವು ಹೆಡದಾಳು ಗ್ರಾಮದ ಚೇತನ್ ಎಂಬುವರ ಮನೆ ಮುಂದೆಯೇ ನಡೆದಿದ್ದು ಇದರಿಂದ ಮನೆಯವರು, ಹಳ್ಳಿವರ ಆತಂಕ ಹೆಚ್ಚಾಗಿದೆ. ಹಳ್ಳಿಗರು ವಾಮಾಚಾರಕ್ಕೆ ಹೆದರಿ ಮನೆಯಿಂದ ಹೊರಬರಲು ಕೂಡ ಹೆದರುತ್ತಿದ್ದಾರೆ.

ಇನ್ನು ವಾಮಾಚಾರದ ಮಾಡಿದ ಸ್ಥಳದಲ್ಲಿ ಅರಿಶಿನ-ಕುಂಕುಮ, ಕಾಯಿ, ಹಣ್ಣು ಸೇರಿದಂತೆ ವಿವಿಧ ವಸ್ತುಗಳು ಪತ್ತೆಯಾಗಿದ್ದು ಸ್ಥಳೀಯರಲ್ಲಿ ಆತಂಕ ಮನೆಮಾಡಿದೆ.

- Advertisement -

Latest News

error: Content is protected !!