Friday, June 5, 2026
Homeಕರಾವಳಿಮಂಗಳೂರು: ಅಕ್ರಮವಾಗಿ ಭಾರತದೊಳಗೆ ನುಗ್ಗಿದ ಬಾಂಗ್ಲಾ ದೇಶಿ ಪ್ರಜೆ ಅರೆಸ್ಟ್

ಮಂಗಳೂರು: ಅಕ್ರಮವಾಗಿ ಭಾರತದೊಳಗೆ ನುಗ್ಗಿದ ಬಾಂಗ್ಲಾ ದೇಶಿ ಪ್ರಜೆ ಅರೆಸ್ಟ್

- Advertisement -
- Advertisement -

ಮಂಗಳೂರು: ಅಕ್ರಮವಾಗಿ ಭಾರತದೊಳಗೆ ನುಗ್ಗಿದ ಬಾಂಗ್ಲಾ ದೇಶಿ ಪ್ರಜೆಯನ್ನು ಅರೆಸ್ಟ್ ಮಾಡಲಾಗಿದೆ.ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಾಂಗ್ಲಾ ದೇಶಿ ಪ್ರಜೆಯನ್ನು ಎಮಿಗ್ರೇಷನ್ ಅಧಿಕಾರಿಗಳು ಬಂಧಿಸಿದ್ದಾರೆ.ಮಾಣಿಕ್ ಹುಸೈನ್ (26) ಬಂಧಿತ ಬಾಂಗ್ಲಾ ದೇಶಿ ಪ್ರಜೆ.

ಈತ ಬಾಂಗ್ಲಾದೇಶದಿಂದ ಉಡುಪಿಗೆ ಬಂದಿದ್ದು, ಉಡುಪಿಯ ವಿಳಾಸವೊಂದನ್ನು ಬಳಸಿ ಭಾರತದ ಪಾಸ್‌ಪೋರ್ಟ್ ಸಿದ್ಧಪಡಿಸಿದ್ದ. ಆತ ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ದುಬೈಗೆ ಪ್ರಯಾಣಿಸಲು ಪ್ರಯತ್ನಿಸುತ್ತಿದ್ದ ಸಂದರ್ಭದಲ್ಲಿ ಎಮಿಗ್ರೇಷನ್ ಅಧಿಕಾರಿಗಳು ಬಂಧಿಸಿದ್ದಾರೆ.

ಉಡುಪಿಯಲ್ಲಿ ಸಿದ್ಧಪಡಿಸಿದ ಪಾಸ್‌ಪೋರ್ಟ್ ನಲ್ಲಿ ಈತ ತನ್ನ ಹೆಸರನ್ನು ಮಹಮ್ಮದ್ ಮಾಣಿಕ್ ಎಂದು ಬದಲಾಯಿಸಿದ್ದ. ಈತನ ಜೊತೆಗೆ ಇನ್ನೂ 5 ಮಂದಿ ಉಡುಪಿಗೆ ಬಂದಿದ್ದು, ಆರೋಪಿಯನ್ನು ಬಜಪೆ ಪೋಲೀಸರಿಗೆ ಒಪ್ಪಿಸಲಾಗಿದ್ದು, ತನಿಖೆ ಕೈಗೆತ್ತಿಕೊಳ್ಳಲಾಗಿದೆ.

- Advertisement -

Latest News

error: Content is protected !!