Thursday, June 4, 2026
Homeತಾಜಾ ಸುದ್ದಿಕೇರಳದ ಓಣಂ ಲಾಟರಿಯಲ್ಲಿ 25 ಕೋಟಿ ಗೆದ್ದ ಮಂಡ್ಯದ ಬೈಕ್‌ ಮೆಕ್ಯಾನಿಕ್

ಕೇರಳದ ಓಣಂ ಲಾಟರಿಯಲ್ಲಿ 25 ಕೋಟಿ ಗೆದ್ದ ಮಂಡ್ಯದ ಬೈಕ್‌ ಮೆಕ್ಯಾನಿಕ್

- Advertisement -
- Advertisement -

ಕೇರಳದ ಓಣಂ ಲಾಟರಿಯಲ್ಲಿ ಮಂಡ್ಯದ ಬೈಕ್‌ ಮೆಕ್ಯಾನಿಕ್  25 ಕೋಟಿ ಗೆದ್ದಿದ್ದಾರೆ. ಕೇರಳದ ತಿರುವೋಣಂ ಬಂಪರ್ ಲಾಟರಿಯಲ್ಲಿ ಮಂಡ್ಯ ಜಿಲ್ಲೆಯ ಪಾಂಡವಪುರದ ಬೈಕ್‌ ಮೆಕ್ಯಾನಿಕ್ ಅಲ್ತಾಫ್‌ 25 ಕೋಟಿ ಗೆದ್ದಿದ್ದಾರೆ.

ಪರಿಚಯಸ್ಥರ ಮೂಲಕ ಖರೀದಿಸಿದ್ದ ಲಾಟರಿ ಟಿಕೆಟ್ ಇದೀಗ ಅಲ್ತಾಪ್ ಬದುಕು ಬದಲಿಸಿದೆ. ತೆರಿಗೆ ಕಡಿತವಾಗಿ 12 ಕೋಟಿ ರೂ. ಲಾಟರಿ ಹಣವನ್ನು ಇವರು ಪಡೆಯಲಿದ್ದಾರೆ. ಲಾಟರಿ ಗೆದ್ದ ವಿಚಾರ ತಿಳಿಯುತ್ತಿದ್ದಂತೆ ಅಲ್ತಾಫ್ ಕೇರಳಕ್ಕೆ ಹೊರಟಿದ್ದಾರೆ. ಲಾಟರಿ ಹಣ ಪಡೆಯುವ ಪ್ರಕ್ರಿಯೆ ಪೂರೈಸಿ ಹಣ ಪಡೆದುಕೊಳ್ಳಲಿದ್ದಾರೆ.

ಬುಧವಾರ ತಿರುವೋಣಂ ಬಂಪರ್ ಲಾಟರಿ ಡ್ರಾ ನಡೆಯಿತು. 71 ಲಕ್ಷ ಟಿಕೆಟ್‌ಗಳು ಮಾರಾಟವಾದ ಓಣಂ ಬಂಪರ್‌ನಲ್ಲಿ 25 ಕೋಟಿ ರೂ ಮೊದಲ ಬಹುಮಾನವಾಗಿತ್ತು. ಅಂತಿಮವಾಗಿ, ಅದು ಕರ್ನಾಟಕದ ಪಾಂಡವಪುರದ ಮೂಲದ ಅಲ್ತಾಫ್ ಎಂಬವರ ಪಾಲಾಗಿದೆ. 25 ಕೋಟಿ ರೂ ಲಾಟರಿ ಹೊಡೆದವರಿಗೆ ಆ ಮೊತ್ತ ಪೂರ್ತಿ ಕೈಗೆ ಸಿಗುವುದಿಲ್ಲ. ತೆರಿಗೆ ಕಡಿತಗೊಳಿಸಿ ಉಳಿದ ಮೊತ್ತವನ್ನು ವಿಜೇತರಿಗೆ ನೀಡಲಾಗುತ್ತದೆ.

- Advertisement -

Latest News

error: Content is protected !!