- Advertisement -
- Advertisement -
ಮೈಸೂರು; ದಸರಾ ಸಂಭ್ರಮದಲ್ಲಿ ಸಂಸದ ಯದುವೀರ್ ಕುಟುಂಬಕ್ಕೆ ಹೊಸ ಅತಿಥಿಯ ಆಗಮನವಾಗಿದೆ. ತ್ರಿಷಿಕಾ ಕುಮಾರಿ ಎರಡನೇ ಗಂಡು ಮಗುವಿನ ತಾಯಿಯಾಗಿದ್ದಾರೆ.
ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ತ್ರಿಶಿಕಾ ಕುಮಾರಿಗೆ ಗಂಡು ಮಗು ಜನನವಾಗಿದೆ. 2016 ರಲ್ಲಿ ಯದುವೀರ್ ಮತ್ತು ತ್ರಿಶಿಕಾ ಕುಮಾರಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. 2017 ರಲ್ಲಿ ಮೊದಲನೇ ಪುತ್ರ ಆದ್ಯವೀರ್ ಜನನವಾಗಿತ್ತು. 7 ವರ್ಷಗಳ ಬಳಿಕ ಎರಡನೇ ಪುತ್ರನ ಆಗಮನವಾಗಿದೆ. ದಸರಾದ ಆಯುಧ ಪೂಜೆಯಂದೇ ಮಗು ಜನಿಸಿದ್ದು ಕುಟುಂಬದ ಸಂಭ್ರಮ ಇಮ್ಮಡಿಗೊಳಿಸಿದೆ.
- Advertisement -