- Advertisement -
![]()
- Advertisement -
ಉಡುಪಿ: ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಬಾಲಕಿಯೋರ್ವಳು ಸಾವನ್ನಪ್ಪಿದ ಘಟನೆ ನಡೆದಿದೆ.
ಸಾವನ್ನಪ್ಪಿದ ಬಾಲಕಿ ಉಡುಪಿಯ ಬಡಗಬೆಟ್ಟಿನ ಯಲ್ಲಪ್ಪ ಅವರ ಪುತ್ರಿ ಅಶ್ವಿನಿ (8) ಎಂದು ತಿಳಿದು ಬಂದಿದೆ.
ಬಾಲಕಿಯು ಹೊಟ್ಟೆ ನೋವಿನಿಂದ ವರ್ಷದಿಂದ ಬಳಲುತ್ತಿದ್ದು, ಸೂಕ್ತ ಚಿಕಿತ್ಸೆಯ ಬಳಿಕ ಗುಣಮುಖರಾಗಿದ್ದರು. ಆದರೆ ಅ. 9ರಂದು ಬೆಳಗ್ಗೆ ಮತ್ತೆ ತೀವ್ರ ಹೊಟ್ಟೆನೋವು ಕಾಣಿಸಿಕೊಂಡಿದ್ದು, ಇವರನ್ನು ಉಡುಪಿಯ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ ಎನ್ನಲಾಗಿದೆ. ಬಾಲಕಿಯನ್ನು ವೈದ್ಯಾಧಿಕಾರಿಗಳು ತುರ್ತು ನಿಗಾ ಘಟಕದಲ್ಲಿ ದಾಖಲಿಸಿದ್ದರು. ಸ್ಪಲ್ಪ ಸಮಯದ ಬಳಿಕ ವೈದ್ಯಾಧಿಕಾರಿಗಳು ಆಕೆ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ ಎನ್ನಲಾಗಿದೆ. ಈ ಕುರಿತಂತೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
- Advertisement -


