ಮಂಗಳೂರು : ಉದ್ಯಮಿ ಮುಮ್ತಾಜ್ ಅಲಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಅವರನ್ನು ಬ್ಲ್ಯಾಕ್ ಮೇಲ್ ಮಾಡುತ್ತಿದ್ದ ಮಹಿಳೆಯ ಪತಿಯನ್ನು ಅರೆಸ್ಟ್ ಮಾಡಲಾಗಿದೆ.
ಮುಮ್ತಾಜ್ ಅಲಿ ಅವರನ್ನು ರಹಮತ್ ಅಲಿಯಾಸ್ ಆಯೇಷಾ ಎಂಬ ಮಹಿಳೆ ಬ್ಲಾಕ್ ಮೇಲ್ ಮಾಡುತ್ತಿದ್ದಳು ಎಂಬ ಆರೋಪ ಕೇಳಿ ಬಂದಿತ್ತು. ಆಕೆಗೆ ಆಕೆಯ ಪತಿ ಶೋಯೆಬ್ ಎಂಬಾತ ಸಾಥ್ ಕೊಟ್ಟಿದ್ದ ಎನ್ನಲಾಗಿದೆ. ಈ ಹಿನ್ನೆಲೆ ಆತನನ್ನು ಅರೆಸ್ಟ್ ಮಾಡಲಾಗಿದೆ.
ಇನ್ನು ಆರೋಪಿ ಮಹಿಳೆ ರೆಹಮತ್ ಅಲಿಯಾಸ್ ಆಯೇಷಾ ಮುಮ್ತಾಜ್ ಅಲಿ ಅವರನ್ನು ಹನಿ ಟ್ರಾಪ್ ಗೆ ಸಿಲುಕಿಸಿದ್ದಲ್ಲದೆ ಹಣಕ್ಕೆ ಬೇಡಿಕೆ ಇಟ್ಟಿದ್ದಳು ಎನ್ನಲಾಗಿದೆ. ಅಲ್ಲದೇ ತನ್ನನ್ನು ಮದುವೆ ಆಗು ಎಂದು ಕಿರುಕುಳ ನೀಡುತ್ತಿದ್ದಳಂತೆ. ಹಾಗಾಗಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ.
ಇದರ ಮಧ್ಯೆ ಆಯೇಷಾಳ ಮಗುವಿನ ಜೊತೆಗೆ ಮುಮ್ತಾಜ್ ಅಲಿ ಆಟ ಆಡುತ್ತಿರುವ ವಿಡಿಯೋವನ್ನು ಆಯೇಷಾ ವಾಟ್ಸಾಪ್ ಸ್ಟೇಟಸ್ ಹಾಕಿದ್ದಳು. ಇದರಿಂದ ಮುಮ್ತಾಜ್ ಅಲಿ ಮನೆಯಲ್ಲಿ ರಾತ್ರಿಯವರೆಗೂ ಗಲಾಟೆ ನಡೆದಿತ್ತು ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ಹೇಳಿದ್ದಾರೆ.