Wednesday, June 3, 2026
Homeಕರಾವಳಿಗ್ರಾಮ ಪಂಚಾಯತ್ ಸದಸ್ಯ, ಬಿಜೆಪಿ ಮುಖಂಡ ಉಮೇಶ್ ಗೌಡ ನಿಧನ

ಗ್ರಾಮ ಪಂಚಾಯತ್ ಸದಸ್ಯ, ಬಿಜೆಪಿ ಮುಖಂಡ ಉಮೇಶ್ ಗೌಡ ನಿಧನ

- Advertisement -
- Advertisement -

ವಿಟ್ಲ: ಇಲ್ಲಿನ ಮುಡ್ನೂರು ಗ್ರಾಮ ಪಂಚಾಯತ್ ಸದಸ್ಯ, ಬಿಜೆಪಿ ಮುಖಂಡ ಅನಾರೋಗ್ಯದಿಂದ ಸೆ.26ರ ಗುರುವಾರದಂದು ರಾತ್ರಿ ನಿಧನರಾಗಿದ್ದಾರೆ. 

ಮೃತಪಟ್ಟವರು ಕುಂಡಡ್ಕ ನಿವಾಸಿ ಉಮೇಶ್ ಗೌಡ (38) ಎನ್ನಲಾಗಿದೆ.

ಕೃಷಿಕರಾಗಿದ್ದ ಉಮೇಶ್ ಅವರಿಗೆ ನಿನ್ನೆ ರಾತ್ರಿ ಹಠಾತ್ ಆರೋಗ್ಯದಲ್ಲಿ ಏರುಪೇರು ಉಂಟಾಗಿದ್ದು, ಆಸ್ಪತ್ರೆಗೆ ದಾಖಲಿಸಲಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ಮೃತರು ತಾಯಿ, ಅಣ್ಣ ತಮ್ಮಂದಿರನ್ನು ಮತ್ತು ಕುಟುಂಬಸ್ಥರನ್ನು ಅಗಲಿದ್ದಾರೆ.

- Advertisement -

Latest News

error: Content is protected !!