Wednesday, June 3, 2026
Homeತಾಜಾ ಸುದ್ದಿಶಿರೂರು ಗುಡ್ಡ ಕುಸಿತ ಪ್ರಕರಣ; ಗೋವಾದಿಂದ ಶಿರೂರಿಗೆ ಯಂತ್ರ; ಇಂದಿನಿಂದ 3ನೇ ಹಂತದ ಶೋಧ ಕಾರ್ಯ

ಶಿರೂರು ಗುಡ್ಡ ಕುಸಿತ ಪ್ರಕರಣ; ಗೋವಾದಿಂದ ಶಿರೂರಿಗೆ ಯಂತ್ರ; ಇಂದಿನಿಂದ 3ನೇ ಹಂತದ ಶೋಧ ಕಾರ್ಯ

- Advertisement -
- Advertisement -

ಅಂಕೋಲಾ: ಶಿರೂರು ಗುಡ್ಡ ಕುಸಿತ ದುರಂತರದಲ್ಲಿ 11 ಜನ ಮೃತಪಟ್ಟಿದ್ದು, ಇದುವರೆಗೆ 8 ಮಂದಿಯ ಶವ ಮಾತ್ರ ಪತ್ತೆ ಮಾಡಲಾಗಿತ್ತು. ಇದೀಗ ಕಾಣೆಯಾದ ಮೂವರ ಶೋಧಕ್ಕಾಗಿ ಗೋವಾದಿಂದ ಶಿರೂರಿಗೆ ಡ್ರೆಜ್ಜರ್ ಯಂತ್ರವನ್ನು ತರಿಸಲಾಗಿದ್ದು, ಸೆ.20ರ ಶುಕ್ರವಾರ 3ನೇ ಹಂತದ ಕಾರ್ಯಾಚರಣೆ ಆರಂಭವಾಗಿದೆ.

ನದಿಯಲ್ಲಿ ಡ್ರೆಜ್ಜರ್ ಯಂತ್ರವನ್ನು ಲಂಗರು ಹಾಕಿ ನಿಲ್ಲಿಸಲಾಗಿದ್ದು, ಡ್ರೆಜ್ಜರ್ ಮೇಲಿರುವ ಕ್ರೇನ್, ಹಿಟಾಚಿ ಸಹಾಯದಿಂದ ಪೈಪ್‌ ಅಳವಡಿಕೆ ಕಾರ್ಯ ಪ್ರಾರಂಭವಾಗಿದೆ ಎಂದು ತಿಳಿದು ಬಂದಿದೆ.

ಈಗಾಗಲೇ 4 ಸ್ಥಳಗಳನ್ನು ನೌಕಾನೆಲೆ ಗುರುತಿಸದ್ದು, ಮಣ್ಣು ತೆರವುಗೊಳಿಸಲು ಡ್ರೆಜ್ಜರ್ ಸಿದ್ದವಾಗಿದೆ. ಎನ್‌ಡಿಆರ್‌ಎಫ್, ಪೊಲೀಸ್, ತಾಲೂಕಾಡಳಿತದ ಸಿಬ್ಬಂದಿಗಳು ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದಾರೆ.

ಇಂದಿನಿಂದ ಕಾಣೆಯಾಗಿರುವ ಶಿರೂರಿನ ಜಗನ್ನಾಥ ನಾಯ್ಕ, ಲೋಕೇಶ್, ಕೇರಳದ ಅರ್ಜುನ್‌ಗಾಗಿ 3ನೇ ಹಂತದ ಹತ್ತು ದಿನದ ಕಾರ್ಯಾಚರಣೆ ನಡೆಯಲಿದೆ.

- Advertisement -

Latest News

error: Content is protected !!