Thursday, June 4, 2026
Homeಕರಾವಳಿಉಡುಪಿಉಡುಪಿ: ಅಪಾರ್ಟ್‌ಮೆಂಟ್ ಆವರಣದೊಳಗೆ ನುಗ್ಗಿ ನಾಯಿ ಮರಿಯನ್ನು ಹೊತ್ತೊಯ್ದ ಚಿರತೆ

ಉಡುಪಿ: ಅಪಾರ್ಟ್‌ಮೆಂಟ್ ಆವರಣದೊಳಗೆ ನುಗ್ಗಿ ನಾಯಿ ಮರಿಯನ್ನು ಹೊತ್ತೊಯ್ದ ಚಿರತೆ

- Advertisement -
- Advertisement -

ಉಡುಪಿ: ಚಿರತೆ ಅಪಾರ್ಟ್‌ಮೆಂಟ್ ಆವರಣದೊಳಗೆ ನುಗ್ಗಿ ನಾಯಿ ಮರಿಯನ್ನು ಹೊತ್ತೊಯ್ದ ಘಟನೆ ಪೆರ್ಡೂರು -ಕುಕ್ಕೆಹಳ್ಳಿ ರಸ್ತೆಯ ಗೋರೇಲು ಎಂಬಲ್ಲಿ ನಡೆದಿದೆ.

ಭಾನುವಾರ ರಾತ್ರಿ ಅಪಾರ್ಟ್‌ಮೆಂಟ್ ಆವರಣದೊಳಗೆ ನುಗ್ಗಿದ ಚಿರತೆಯು ಅಲ್ಲಿ ಕಟ್ಟಿ ಹಾಕಲಾಗಿದ್ದ ನಾಯಿಮರಿಯನ್ನು ಹೊತ್ತೊಯ್ದಿದ್ದು, ಇದರಿಂದ ಪರಿಸರದ ಜನತೆಯಲ್ಲಿ ಆತಂಕ ಉಂಟು ಮಾಡಿದೆ. ಚಿರತೆ ನಾಯಿಮರಿಯನ್ನು ಹೊತ್ತೊಯ್ದ ದೃಶ್ಯ ಸಿಸಿಟಿವಿಯಯಲ್ಲಿ ಸೆರೆಯಾಗಿದೆ.

ಈ ಹಿನ್ನೆಲೆಯಲ್ಲಿ ಉಪ ವಲಯ ಅರಣ್ಯಾಧಿಕಾರಿ ನವೀನ್ ಬಿ.ಎನ್. ಹಾಗೂ ಸ್ಥಳೀಯ ಅರಣ್ಯ ಗಸ್ತು ಪಾಲಕ ಶ್ರೀಕಾಂತ್ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದರು. ಅದರಂತೆ ಅರಣ್ಯ ಇಲಾಖೆಯವರು ಇಂದು ಅಪಾರ್ಟ್‌ಮೆಂಟ್ ಸಮೀಪದ ಸಣ್ಣ ಹಾಡಿಯಲ್ಲಿ ಬೋನನ್ನು ಇರಿಸಿ ಚಿರತೆಯ ಸೆರೆಗೆ ಕಾರ್ಯಾ ಚರಣೆಯನ್ನು ಆರಂಭಿಸಿದ್ದಾರೆ.

- Advertisement -

Latest News

error: Content is protected !!