Wednesday, June 24, 2026
Homeಕರಾವಳಿಈಶ್ವರಮಂಗಲ ದಿಂದ ಪುತ್ತೂರಿಗೆ ಹೊಸ ಬಸ್‌ ಆರಂಭ

ಈಶ್ವರಮಂಗಲ ದಿಂದ ಪುತ್ತೂರಿಗೆ ಹೊಸ ಬಸ್‌ ಆರಂಭ

- Advertisement -
- Advertisement -

ಈಶ್ವರಮಂಗಲ: ಬೆಳಗ್ಗಿನ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಈಶ್ವರಮಂಗಲದಿಂದ ಪುತ್ತೂರಿಗೆ ಕೆಎಸ್‌ಆರ್‌ಟಿಸಿ ಬಸ್‌ ಸಂಚಾರ ಆರಂಭಗೊಂಡಿದೆ.

ಇಂದು ಬೆಳಗ್ಗೆ ಈಶ್ವರ ಮಂಗಲಕ್ಕೆ ಬಂದ ಬಸ್ಸನ್ನು ಈಶ್ವರಮಂಗಲ ಜಂಕ್ಷನ್‌ ಬಳಿಯಲ್ಲಿ ಕಾಂಗ್ರೆಸ್‌ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಸ್ವಾಗತಿಸಿ, ಸಂಭ್ರಮಾಚರಿಸಿದರು.

ಬೆಳಗ್ಗಿನ ವೇಳೆ ಈಶ್ವರಮಂಗಲ ಕಡೆಯಿಂದ ಪುತ್ತೂರಿಗೆ ಹೋಗುವ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಸ್ಥಳಾವಕಾಶವಿಲ್ಲದೆ ಶಾಲೆ, ಕಾಲೇಜು ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಬಹಳಷ್ಟು ಸಮಸ್ಯೆಗಳಾಗುತ್ತಿತ್ತು. ಇದೀಗ ಹೊಸ ಬಸ್ ಸೇವೆ ಆರಂಭವಾಗಿರುವುದು ಸಾರ್ವಜನಿಕರಲ್ಲಿ ಸಂತಸವನ್ನು ತಂದಿದೆ.

- Advertisement -

Latest News

error: Content is protected !!