Monday, June 8, 2026
Homeಕರಾವಳಿಸುಳ್ಯ; ಬೈಕ್ ನಲ್ಲಿ ಹೋಗುವಾಗ ಕೊಡೆ ಬಿಡಿಸಿ, ನಿಯಂತ್ರಣ ತಪ್ಪಿ ರಸ್ತೆಗೆ ಬಿದ್ದ ಉಪನ್ಯಾಸಕಿ: ಚಿಕಿತ್ಸೆ...

ಸುಳ್ಯ; ಬೈಕ್ ನಲ್ಲಿ ಹೋಗುವಾಗ ಕೊಡೆ ಬಿಡಿಸಿ, ನಿಯಂತ್ರಣ ತಪ್ಪಿ ರಸ್ತೆಗೆ ಬಿದ್ದ ಉಪನ್ಯಾಸಕಿ: ಚಿಕಿತ್ಸೆ ಫಲಿಸದೇ ಆಸ್ಪತ್ರೆಯಲ್ಲಿ ಸಾವು

- Advertisement -
- Advertisement -

ಪುತ್ತೂರು; ಬೈಕ್ ನಲ್ಲಿ ಹೋಗುವಾಗ ಕೊಡೆ ಬಿಡಿಸಿದ ಪರಿಣಾಮ ನಿಯಂತ್ರಣ ತಪ್ಪಿ ರಸ್ತೆಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ  ಉಪನ್ಯಾಸಕಿ  ಚಿಕಿತ್ಸೆ ಫಲಿಸದೇ ಮಂಗಳೂರಿನ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಮಾಡಾವು ಜ್ಯೂನಿಯರ್ ಕಾಲೇಜಿನ ಅತಿಥಿ ಉಪನ್ಯಾಸಕಿ ಸುನಂದ ಅಚ್ಚುತ ಪೂಜಾರಿ ಮೃತ ದುರ್ದೈವಿ.

ಸುನಂದ ಅಚ್ಚುತ ಪೂಜಾರಿಯವರು ಕಳೆದ ಶುಕ್ರವಾರ ತಮ್ಮ ಕುಟುಂಬದ ತರವಾಡು ಮನೆ, ಈಶ್ವರಮಂಗಲದ ಮೇನಾಲಕ್ಕೆ ನಿಕಟ ಸಂಬಂಧಿಕರೊಬ್ಬರ ಬೈಕಲ್ಲಿ ಹೋಗುತ್ತಿರುವಾಗ ಮಳೆ ಬಂದ ಕಾರಣಕ್ಕಾಗಿ ಕೊಡೆ ಬಿಡಿಸಿದ್ದಾರೆ. ಈ ವೇಳೆ, ಗಾಳಿಗೆ ಕೊಡೆ ಎಳೆಯಲ್ಪಟ್ಟು ಇವರು ಬೈಕಿಂದ ಜಾರಿ ರಸ್ತೆಗೆ ಬಿದ್ದು ತಲೆಗೆ ತೀವ್ರ ಗಾಯವಾಗಿತ್ತು. ಅವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು.ಬುಧವಾರ ರಾತ್ರಿ ಮಂಗಳೂರಿನ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ಸುಳ್ಯದ ಬೀರಮಂಗಲ ನಿವಾಸಿಯಾಗಿರುವ ಅವರು, ಬಂಟ್ವಾಳದ ಕಾಮಾಜೆ ಸರಕಾರಿ ಪದವಿ ಕಾಲೇಜಿನಲ್ಲಿ ಉಪನ್ಯಾಸಕರಾಗಿರುವ ಡಾ.ಅಚ್ಚುತ ಪೂಜಾರಿಯವರ ಪತ್ನಿಯಾಗಿದ್ದಾರೆ.

- Advertisement -

Latest News

error: Content is protected !!