- Advertisement -
- Advertisement -
ಭಟ್ಕಳ: ರಾಜ್ಯದ ಕರಾವಳಿಯಲ್ಲಿ ತೀವ್ರ ಮತ್ಸ್ಯ ಕ್ಷಾಮ ಉಂಟಾಗಿರುವ ಹಿನ್ನಲೆಯಲ್ಲಿ ಮೀನುಗಾರಿಕೆ ಮತ್ತು ಬಂದರು ಇಲಾಖೆ ಸಚಿವರು ತಾವೇ ಸ್ವತಃ ಬೋಟ್ ಚಲಾಯಿಸಿಕೊಂಡು ಹೋಗಿ ಸಮುದ್ರಕ್ಕೆ ಬಾಗಿನ ಅರ್ಪಿಸಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ ಇಂದು ತಾವೇ ಖುದ್ದಾಗಿ ಬೋಟ್ ಚಲಾಯಿಸಿಕೊಂಡು ಸಮುದ್ರಕ್ಕೆ ಹೋದ ಸಚಿವ ಮಂಕಾಳ ವೈದ್ಯ ಅರಬ್ಬಿ ಸಮುದ್ರಕ್ಕೆ ಬಾಗಿನ ಅರ್ಪಿಸಿದ್ದಾರೆ.
ಸ್ಥಳೀಯ ಮುಖಂಡರನ್ನು ಬೋಟ್ ನಲ್ಲಿ ಕೂರಿಸಿಕೊಂಡು ತಾವೇ ಸ್ವತಃ ಬೋಟ್ ಚಲಾಯಿಸಿಕೊಂಡು ಹೋಗಿ ಸಮುದ್ರಕ್ಕೆ ಬಾಗಿನ ಅರ್ಪಿಸಿದ್ದಾರೆ.
ಬಾಗಿನ ಅರ್ಪಿಸಿದ ಬಳಿಕ ಮೀನುಗಾರಿಕಾ ಉದ್ಯಮ ಏಳಿಗೆ ಕಾಣುವಂತೆ ಭಟ್ಕಳದ ಅಳ್ವೆಕೊಡಿ ದುರ್ಗಾಪರಮೇಶ್ವರಿ ದೇವಿಗೆ ಪೂಜೆ ಸಲ್ಲಿಸಿದ್ದಾರೆ.
- Advertisement -