Thursday, June 4, 2026
Homeಕರಾವಳಿಮಂಗಳೂರು:  ಸಾಲ ನೀಡೋದಾಗಿ ಹೇಳಿ ಸಾಲ ಕೇಳಿದ ಮಹಿಳೆಯಿಂದಲೇ ಹಣ ವಸೂಲಿ

ಮಂಗಳೂರು:  ಸಾಲ ನೀಡೋದಾಗಿ ಹೇಳಿ ಸಾಲ ಕೇಳಿದ ಮಹಿಳೆಯಿಂದಲೇ ಹಣ ವಸೂಲಿ

- Advertisement -
- Advertisement -

ಮಂಗಳೂರು:  ಸಾಲ ನೀಡೋದಾಗಿ ಹೇಳಿ ಸಾಲ ಕೇಳಿದವರಿಂದಲೇ ಮಹಿಳೆ ಹಣ ವಸೂಲಿ ಮಾಡಿದ ಘಟನೆ ಮಂಗಳೂರಿನಲ್ಲಿ ನಡೆದಿದೆ.

ಮಹಿಳೆಯೋರ್ವರು ಇನ್‌ಸ್ಟಾಗ್ರಾಂನಲ್ಲಿ ಹಣಕಾಸು ಸಂಸ್ಥೆಯೊಂದರ ಜಾಹೀರಾತು ನೋಡಿ 25 ಲಕ್ಷ ರೂಪಾಯಿ ಸಾಲಕ್ಕಾಗಿ ಸಂಪರ್ಕಿಸಿದ್ದರು. ಕೂಡಲೇ ನಕಲಿ ಸಂಸ್ಥೆಯ ಪ್ರತಿನಿಧಿಗಳು ಮಹಿಳೆಗೆ ಅಗತ್ಯ ಸಾಲ ಸೌಲಭ್ಯ ಒದಗಿಸುವುದಾಗಿ ತಿಳಿಸಿದ್ದರು. ಆಕೆಯ ವಾಟ್ಸಾಪ್  ಸಂಖ್ಯೆಯನ್ನು ಪಡೆದು ಅಗತ್ಯ ದಾಖಲೆಗಳನ್ನು ಕಳುಹಿಸುವಂತೆ ತಿಳಿಸಿದ್ದರು.

ಅದರಂತೆ ಮಹಿಳೆ ಫೋಟೋ, ದಾಖಲೆಗಳನ್ನು ಕಳುಹಿಸಿಕೊಟ್ಟಿದ್ದರು. ಆ ಬಳಿಕ ವಂಚಕರು ಮಹಿಳೆಯ ಹೆಸರಿನಲ್ಲಿ ಸಾಲ ಮಂಜೂರಾತಿ ಪತ್ರವನ್ನು ತಯಾರಿಸಿ ವಾಟ್ಸಾಪ್ ಮೂಲಕ ಕಳುಹಿಸಿಕೊಟ್ಟಿದ್ದರು. ಅದರಲ್ಲಿ ಮಹಿಳೆಯ ಫೋಟೋ ಸೇರಿದಂತೆ ಎಲ್ಲ ವಿವರಗಳು ಇದ್ದವು. ಇದರಿಂದ ಮಹಿಳೆ ಆ ಸಂಸ್ಥೆಯ ಬಗ್ಗೆ ನಂಬಿಕೆ ಇಟ್ಟರು. ಬಳಿಕ ಸಂಸ್ಥೆಯ ಪ್ರತಿನಿಧಿಗಳೆಂದು ಪರಿಚಯಿಸಿಕೊಂಡವರು ಮಹಿಳೆಗೆ 25 ಲ.ರೂ. ಸಾಲ ಮಂಜೂರಾಗಿದೆ. ಆದರೆ ಅದಕ್ಕೆ ಸಂಬಂಧಿಸಿದಂತೆ ಇನ್ಶೂರೆನ್ಸ್‌, ತೆರಿಗೆ ಸಂಬಂಧಿ ಹಣ ಪಾವತಿಸಲು ಬಾಕಿ ಇದೆ. ಇದನ್ನು ಪಾವತಿಸಿದ ಕೂಡಲೆ ಖಾತೆಗೆ 25 ಲ.ರೂ. ಜಮೆಯಾಗಲಿದೆ ಎಂದು ತಿಳಿಸಿದ್ದರು.

ಬಳಿಕ ನಾನಾ ನೆಪಗಳನ್ನು ಹೇಳಿ ಮಹಿಳೆಯಿಂದ 2.50 ಲ.ರೂ.ಗಳನ್ನು ವರ್ಗಾಯಿಸಿಕೊಂಡಿದ್ದರು. ಆದರೂ ಆಕೆಗೆ ಸಾಲದ ಮೊತ್ತವನ್ನು ಜಮೆ ಮಾಡಿರಲಿಲ್ಲ. ಈ ಬಗ್ಗೆ ವಿಚಾರಿಸಿದಾಗ ಇದೊಂದು ನಕಲಿ ಸಂಸ್ಥೆಯಾಗಿದ್ದು ವಂಚನೆ ಮಾಡಿರುವುದು ಗೊತ್ತಾಗಿದೆ. ಅನಂತರ ಮಹಿಳೆ ಪೊಲೀಸರಿಗೆ ದೂರು ನೀಡಿದ್ದಾರೆ.

- Advertisement -

Latest News

error: Content is protected !!