Wednesday, June 3, 2026
Homeಕರಾವಳಿಬಿಜೆಪಿ ಮುಖಂಡ ಅರುಣ್ ಕುಮಾರ್ ಪುತ್ತಿಲ ವಿರುದ್ಧ ಲೈಂಗಿಕ ದೌರ್ಜನ್ಯ‌ದ ದೂರು; ಎಫ್ ಐಆರ್ ದಾಖಲು

ಬಿಜೆಪಿ ಮುಖಂಡ ಅರುಣ್ ಕುಮಾರ್ ಪುತ್ತಿಲ ವಿರುದ್ಧ ಲೈಂಗಿಕ ದೌರ್ಜನ್ಯ‌ದ ದೂರು; ಎಫ್ ಐಆರ್ ದಾಖಲು

- Advertisement -
- Advertisement -

ಪುತ್ತೂರು: ಲೈಂಗಿಕ ದೌರ್ಜನ್ಯ ಆರೋಪದಡಿ ಪುತ್ತೂರಿನ ಬಿಜೆಪಿ ಮುಖಂಡ ಅರುಣ್ ಕುಮಾರ್ ಪುತ್ತಿಲ ವಿರುದ್ಧ ಎಫ್ಐಆರ್ ದಾಖಲಾಗಿದೆ.

ಪುತ್ತೂರು ಮೂಲದ 47 ವರ್ಷದ ಮಹಿಳೆ ದಕ್ಷಿಣ ಕನ್ನಡ ಮಹಿಳಾ ಪೊಲೀಸ್ ಠಾಣೆಯಲ್ಲಿ ಲೈಂಗಿಕ ದೌರ್ಜನ್ಯದ ದೂರು ದಾಖಲಿಸಿದ್ದಾರೆ.

ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ 2023 ರಲ್ಲಿ ದೌರ್ಜನ್ಯ ಎಸಗಿದ್ದು, ವೀಡಿಯೋ, ಸೆಲ್ಫಿ ಮತ್ತು ಪೋಟೋ ತೆಗೆದುಕೊಂಡು ಬ್ಲ್ಯಾಕ್ ಮೇಲ್ ಮಾಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.‌

ಮಹಿಳೆಯೊಬ್ಬರ ಜೊತೆಗಿನ ಅರುಣ್ ಕುಮಾರ್ ಪುತ್ತಿಲ ಅವರದ್ದೆನ್ನಲಾದ ಆಡಿಯೋ ಕ್ಲಿಪ್ ಕೆಲವು ದಿನಗಳ ಹಿಂದೆ ಸಾಮಾಜಿಕ ಜಾಲತಾಣಗಳಲ್ಲಿ ಹರದಾಡಿತ್ತು.

ಈ ಮಧ್ಯೆ ತಮ್ಮ ವಿರುದ್ಧದ ಮಾನಹಾನಿಕರ ಸುದ್ದಿಗಳನ್ನು ಪ್ರಸಾರ ಮಾಡದಂತೆಯೂ ಕೆಲವು ದಿನಗಳ ಹಿಂದೆ ಅರುಣ್ ‌ಕುಮಾರ್ ಪುತ್ತಿಲ‌ ನ್ಯಾಯಾಲಯದಿಂದ ನಿರ್ಬಂಧಕಾಜ್ಞೆ ತಂದಿದ್ದರು.

- Advertisement -

Latest News

error: Content is protected !!