- Advertisement -
![]()
- Advertisement -
ಬಂಟ್ವಾಳ; ಶಂಭುಗ ಫ್ರೆಂಡ್ಸ್ ಶಂಭುಗ ಇದರ ನೇತೃತ್ವದಲ್ಲಿ ಶಂಭುಗ ಬೃಂದಾವನ ಬಾಲಗೋಕುಲದಲ್ಲಿ 2024 ಆ. 26 ಸೋಮವಾರ ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಮೊಸರು ಕುಡಿಕೆ ಉತ್ಸವ ಹಾಗೂ ಆಟೋಟ ಸ್ಪರ್ಧೆ ನಡೆಯಿತು
ಕಾರ್ಯಕ್ರಮವನ್ನು ದೀಪ ಪ್ರಜ್ವಲನೆಯನ್ನು ಮಾಡುವ ಮೂಲಕ ಸಚಿನ್ ರೈ ಮಾಣಿಗುತ್ತು, ಸಿತಾರಾಮ್ ಶೆಟ್ಟಿ ಶಂಭುಗ, ರಾಧಕೃಷ್ಣ ಅಡ್ಯಂತಾಯ,ಗಣೇಶ್ ರೈ ಸಾಗು,ಗೋಪಾಲ್ ಮೂಲ್ಯ ನೆಲ್ಲಿ, ಲೋಕೆಶ್ ಪಲ್ಲತ್ತಿಲ, ಹರಿಯಪ್ಪ ಮೂಲ್ಯ ಬರೆ, ಪ್ರವೀಣ್ ಬಂಗುಲೆ, ಕೊರಗಪ್ಪ ಶೆಟ್ಟಿ ಶಂಭುಗ ಇವರು ಚಾಲನೆ ನೀಡಿದರು.

ಕಾರ್ಯಕ್ರಮದಲ್ಲಿ ಬೃಂದಾವನ ಬಾಲಗೋಕುಲದ ವಿದ್ಯಾರ್ಥಿಗಳಿಂದ ಕುಣಿತ ಭಜನೆ ಹಾಗೂ ಸಣ್ಣ ಮಕ್ಕಳಿಗೆ ಕೃಷ್ಣ ಮತ್ತು ರಾಧೆಯ ಛದ್ಮವೇಷ ಸ್ಪರ್ಧೆ ನಡೆಯಿತು. ಅತಿಥಿಯವರನ್ನು ಲಿಶ್ವಿತ ಶಂಭುಗ ಅವರು ಸ್ವಾಗತಿಸಿದರು. ಕಾರ್ಯಕ್ರಮವನ್ನು ನರಸಿಂಹ ಶೆಟ್ಟಿ ಮಾಣಿ ನಿರೂಪಣೆ ಮಾಡಿದರು. ಹರ್ಷರಾಜ್ ನೆಲ್ಲಿ ಇವರು ಅತಿಥಿಗಳಿಗೆ ಧನ್ಯವಾದ ಸಮರ್ಪಿಸಿದರು.
- Advertisement -


