Wednesday, June 3, 2026
Homeತಾಜಾ ಸುದ್ದಿಅಡಕೆಗೆ ತೀವ್ರ ಕೊಳೆ ರೋಗ ಹಾವಳಿ; ಕೃಷಿಕ ಮನನೊಂದು ಹೊಂಡಕ್ಕೆ ಹಾರಿ ಆತ್ಮಹತ್ಯೆ

ಅಡಕೆಗೆ ತೀವ್ರ ಕೊಳೆ ರೋಗ ಹಾವಳಿ; ಕೃಷಿಕ ಮನನೊಂದು ಹೊಂಡಕ್ಕೆ ಹಾರಿ ಆತ್ಮಹತ್ಯೆ

- Advertisement -
- Advertisement -

ಸಾಗರ: ತಾಲೂಕಿನ ವ್ಯಕ್ತಿಯೋರ್ವ ಈ ಬಾರಿಯ ಅಡಕೆಯ ತೀವ್ರ ಕೊಳೆ ಹಾವಳಿಯಿಂದ ಸಂಕಷ್ಟಕ್ಕೊಳಗಾಗಿ ಕೃಷಿಹೊಂಡಕ್ಕೆ ಹಾರಿ ಆತ್ಮಹತ್ಯೆಗೆ ಶರಣಾದ ಘಟನೆ ನಡೆದಿದೆ.

ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ ಬ್ಯಾಕೋಡು ಸಮೀಪದ ಬೈನೆಮನೆಯ ರೈತ ಅಶೋಕ(42) ಎಂದು ತಿಳಿದು ಬಂದಿದೆ.

ಘಟನೆಯ ವಿವರ: ಅಶೋಕ ಬ್ಯಾಂಕ್‌ಗಳಲ್ಲಿ ದೊಡ್ಡ ಮೊತ್ತದ ಸಾಲ ಪಡೆದಿದ್ದರು. ಅವರು ಎರಡು ಎಕರೆ ಅಡಕೆ ತೋಟ ಹೊಂದಿದ್ದರು. ಈ ನಡುವೆ ಅಡಕೆಗೆ ಕೊಳೆ ರೋಗ ಬಂದ ಕಾರಣ ಅಡಕೆ ಸಂಪೂರ್ಣವಾಗಿ ನೆಲದ ಪಾಲಾಗಿತ್ತು. ಇಬ್ಬರು ಪುತ್ರರು ಹಾಗೂ ಓರ್ವ ಮಗಳು ಸೇರಿದಂತೆ ಮೂರು ಮಕ್ಕಳ ವಿದ್ಯಾಭ್ಯಾಸದ ಒತ್ತಡವೂ ಸೇರಿದಂತೆ ತೀವ್ರ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದರು. ಇದರಿಂದ ಮನನೊಂದ ಅಶೋಕ ಮನೆಯ ಕೃಷಿ ಹೊಂಡಕ್ಕೆ ಹಾರಿ ಜೀವ ಕಳೆದುಕೊಂಡಿದ್ದಾರೆ ಎನ್ನಲಾಗಿದೆ.

ಘಟನೆಯ ಕುರಿತು ಕಾರ್ಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!