Friday, June 27, 2025
Homeತಾಜಾ ಸುದ್ದಿ1 ವರ್ಷದಲ್ಲಿ ಸರ್ಕಾರದಿಂದ ಅನಾರೋಗ್ಯಕ್ಕಾಗಿ ಕೋಟ್ಯಂತರ ರೂಪಾಯಿ ಕ್ಲೇಮ್‌ ಮಾಡಿಕೊಂಡ ಶಾಸಕರ ಪಟ್ಟಿ ಇಲ್ಲಿದೆ ನೋಡಿ!

1 ವರ್ಷದಲ್ಲಿ ಸರ್ಕಾರದಿಂದ ಅನಾರೋಗ್ಯಕ್ಕಾಗಿ ಕೋಟ್ಯಂತರ ರೂಪಾಯಿ ಕ್ಲೇಮ್‌ ಮಾಡಿಕೊಂಡ ಶಾಸಕರ ಪಟ್ಟಿ ಇಲ್ಲಿದೆ ನೋಡಿ!

spot_img
- Advertisement -
- Advertisement -

ಬೆಂಗಳೂರು: ಆರ್‌ಟಿಐಯು ಸರ್ಕಾರದಿಂದ ಅನಾರೋಗ್ಯ ಕಾರಣಕ್ಕಾಗಿ ಮೆಡಿಕಲ್ ಬಿಲ್ ಪಡೆದಿರುವ ವಿಧಾನ ಪರಿಷತ್ ಸದಸ್ಯರು ಹಾಗೂ ಶಾಸಕರ ಪಟ್ಟಿಯನ್ನು ಮಾಹಿತಿ ನೀಡಿದೆ. ಹೋರಾಟಗಾರರ ವೇದಿಕೆಯ ಎಚ್.ವಿ ವೆಂಕಟೇಶ್ ಈ ಕುರಿತಾಗಿ ಆರ್‌ಟಿಐ ಮಾಹಿತಿ ಕೇಳಿದ್ದು, 2023ರ ಮೇ 1 ರಿಂದ 2024ರ ಜುಲೈವರೆಗೆ ವಿಧಾನ ಪರಿಷತ್‌ ಸದಸ್ಯರು ಹಾಗೂ ಶಾಸಕರು ಸರ್ಕಾರದಿಂದ ಕ್ಲೇಮ್ ಮಾಡಿಕೊಂಡಿರುವ ಹಣದ ಮಾಹಿತಿ ಪಟ್ಟಿ ನೀಡಿದೆ.

ವಿಧಾನ ಪರಿಷತ್‌ ಸದಸ್ಯರು ಹಾಗೂ ಶಾಸಕರು ಲಕ್ಷಾಂತರ ರೂಪಾಯಿ ಹಣವನ್ನು 2023ರ ಮೇ 1 ರಿಂದ 2024ರ ಜುಲೈವರೆಗೆ ಕ್ಲೇಮ್‌ ಮಾಡಿಕೊಂಡಿದ್ದಾರ. ಅನಾರೋಗ್ಯಕ್ಕಾಗಿ ಸರ್ಕಾರದಿಂದ ಹಣ ಕ್ಲೇಮ್ ಮಾಡಲು ಅವಕಾಶವಿದ್ದು, ಈ ನಿಟ್ಟಿನಲ್ಲಿ ವಿಧಾನ ಪರಿಷತ್‌ ಸದಸ್ಯರು ಹಾಗೂ ಶಾಸಕರು ಲಕ್ಷ ಲಕ್ಷ ಹಣವನ್ನು ಕ್ಲೇಮ್‌ ಮಾಡಿಕೊಂಡಿದ್ದಾರೆ.

ಯಾವ ಯಾವ ಶಾಸಕರು ಎಷ್ಟು ಹಣವನ್ನು ಕ್ಲೇಮ್ ಮಾಡಿಕೊಂಡಿದ್ದಾರೆ ಎನ್ನುವ ಬಗ್ಗೆ ನೈಜ ಹೋರಾಟಗಾರರ ವೇದಿಕೆಯಿಂದ ಮಾಹಿತಿ ಬಹಿರಂಗವಾಗಿದೆ. ಅತಿ ಹೆಚ್ಚು ಹಣ ಕ್ಲೇಮ್ ಮಾಡಿದ ಪಟ್ಟಿಯಲ್ಲಿ ಮೊದಲನೇ ಹೆಸರು ವಿಧಾನ ಪರಿಷತ್ ಸದಸ್ಯೆ ಬಿಜೆಪಿ ಎಂಎಲ್‌ಸಿ ಭಾರತಿ ಶೆಟ್ಟಿ. ಅವರು ಒಂದೇ ವರ್ಷದಲ್ಲಿ ದಾಖಲೆಯ 48.70 ಲಕ್ಷ ರೂಪಾಯಿ ಹಣವನ್ನು ಕ್ಲೇಮ್‌ ಮಾಡಿಸಿಕೊಂಡಿದ್ದಾರೆ.

ಇವರ ನಂತರದಲ್ಲಿ ಸಿಪಿ ಯೋಗೇಶ್ವರ್‌ 2ನೇ ಸ್ಥಾನದಲ್ಲಿದ್ದಾರೆ. ಸರ್ಕಾರಿದಂದ 39.64 ಲಕ್ಷ ರೂಪಾಯಿ ಹಣವನ್ನು ತಮ್ಮ ಆರೋಗ್ಯಕ್ಕಾಗಿ ಅವರು ಕ್ಲೇಮ್‌ ಮಾಡಿಸಿಕೊಂಡಿದ್ದಾರೆ. ಸಚಿವೆ ಲಕ್ಷ್ಮೀ ಹೆಬ್ಬಾಳ್ಖರ್‌ ಅವರ ತಮ್ಮ ಚನ್ನರಾಜ್‌ ಹಟ್ಟುಹೊಳಿ ಮೂರನೇ ಸ್ಥಾನದಲ್ಲಿದ್ದಾರೆ. ಅಕ್ಕ ಸಚಿವರಾಗಿದ್ರೂ ಆರೋಗ್ಯಕ್ಕಾಗಿ 17.03 ಲಕ್ಷ ರೂಪಾಯಿ ಬಿಲ್‌ಅನ್ನು ಹಟ್ಟಿಹೊಳಿ ಮಾಡಿದ್ದಾರೆ. ಇನ್ನು ಗೋವಿಂದರಾಜು ಒಂದೇ ವರ್ಷದಲ್ಲಿ ಆರೋಗ್ಯಕ್ಕಾಗಿ 7.26 ಲಕ್ಷ ರೂಪಾಯಿ, ಹಿರಿಯ ಶಾಸಕ ಲಕ್ಷ್ಮಣ್ ಸವದಿ 2.41 ಲಕ್ಷ ರೂಪಾಯಿ, ಟಿ ಎ ಶರವಣ ಕೂಡ 2.14 ರೂಪಾಯಿ ಹಣ ಕ್ಲೇಮ್‌ ಮಾಡಿದ್ದಾರೆ.

ಹೆಚ್ಚು ಮೆಡಿಕಲ್ ಬಿಲ್ ಕ್ಲೈಮ್‌ ಮಾಡಿದವರು; ಹರೀಶ್ ಕುಮಾರ್- 2 ಲಕ್ಷ ರೂಪಾಯಿ, ಮರಿತಿಬ್ಬೇಗೌಡ- 1,54,995 ರೂಪಾಯಿ, ಎನ್. ವಾಯ್ ನಾರಾಯಣಸ್ವಾಮಿ 3 ಲಕ್ಷ ರೂಪಾಯಿ, ಅಬ್ದುಲ್ ಜಬ್ಬಾರ್- 1,1,345 ರೂಪಾಯಿ, ಸುಧಾಮ್ ದಾಸ್- 2,04,542 ರೂಪಾಯಿ, ಸುನೀಲ್ ವಲ್ಯಾಪುರೆ- 2,75,000 ರೂಪಾಯಿ, ಛಲವಾದಿ ನಾರಾಯಣಸ್ವಾಮಿ- 1,18,828 ರೂಪಾಯಿ, ವೈಎಂ ಸತೀಶ್- 2,77,559 ರೂಪಾಯಿ, ಮಧು ಮಾದೇಗೌಡ- 2,46,233 ರೂಪಾಯಿ, ರಘುನಾಥ್ ಮಲ್ಕಾಪುರೆ- 1,34,823 ರೂಪಾಯಿ, ಎಂ ಜಿ ಮೂಳೆ- 2,24,282 ರೂಪಾಯಿ.

- Advertisement -
spot_img

Latest News

error: Content is protected !!