Saturday, June 6, 2026
Homeಕರಾವಳಿಉಡುಪಿಲವ್ ಜಿಹಾದ್, ಡ್ರಗ್ಸ್ ಜಾಲದ ಬಗ್ಗೆ ಸಮಗ್ರ ತನಿಖೆ ನಡೆಯಲಿ; ಬಿಜೆಪಿ ಯುವಮೋರ್ಚಾ ಆಕ್ರೋಶ

ಲವ್ ಜಿಹಾದ್, ಡ್ರಗ್ಸ್ ಜಾಲದ ಬಗ್ಗೆ ಸಮಗ್ರ ತನಿಖೆ ನಡೆಯಲಿ; ಬಿಜೆಪಿ ಯುವಮೋರ್ಚಾ ಆಕ್ರೋಶ

- Advertisement -
- Advertisement -

ಕೋಟ: ಅನ್ಯಕೋಮಿನ  4 ಮಂದಿ ಯುವಕರು ಕಾರ್ಕಳ ನಗರ ಠಾಣಾ ವ್ಯಾಪ್ತಿಯ ನಿವಾಸಿ ಹಿಂದೂ ಯುವತಿಗೆ ಅಮಲು ಪದಾರ್ಥ ನೀಡಿ ಅತ್ಯಾಚಾರ ನಡೆಸಿದ ಪ್ರಕರಣ ಅತ್ಯಂತ ಹೀನ ಕೃತ್ಯವಾಗಿದೆ. ಲವ್ ಜಿಹಾದ್ ಸಂಚು ಕೂಡ ಈ ದುಷ್ಕೃತ್ಯದ ಹಿಂದೆ ಅಡಗಿರುವ ಅನುಮಾನವಿದೆ ಎಂದು ಉಡುಪಿ ಜಿಲ್ಲಾ ಬಿಜೆಪಿ ಯುವಮೋರ್ಚಾ ಖಂಡನೆ ವ್ಯಕ್ತಪಡಿಸಿದೆ.

ಜಿಲ್ಲೆಯ ಕಾನೂನು ಸುವ್ಯವಸ್ಥೆಯನ್ನೇ ಇಂತಹ ಘಟನೆ ಪ್ರಶ್ನಿಸುವ ರೀತಿಯಲ್ಲಿದ್ದು, ಸೂಕ್ತ ಕಠಿಣ ಶಿಕ್ಷೆ ನೀಡುವುದರೊಂದಿಗೆ 4 ಮಂದಿ ಆರೋಪಿಗಳಿಗೆ ಬೆಂಬಲವಾಗಿ‌ ನಿಂತ ಮತೀಯ ಶಕ್ತಿಗಳು ಯಾವವು ಎನ್ನುವುದನ್ನು ಕಂಡುಹಿಡಿಯಬೇಕು. ವ್ಯವಸ್ಥಿತವಾದ ಲವ್ ಜಿಹಾದ್ ಸಂಚಿಗೆ ಸಹಕರಿಸುತ್ತಿರುವ ವ್ಯವಸ್ಥೆಗಳು ಯಾರು ಎನ್ನುವ ಬಗ್ಗೆ ಸಮಗ್ರ ತನಿಖೆ ಪೊಲೀಸ್ ಇಲಾಖೆಯಿಂದ‌ ನಡೆಯಬೇಕು ಹಾಗೂ ಕಾಂಗ್ರೆಸ್ ಆಡಳಿತದಲ್ಲಿರುವ ಸಂದರ್ಭದಲ್ಲೇ ಇಂತಹ ಘಟನೆಗಳು ಮತ್ತೆ – ಮತ್ತೆ ನಡೆಯುತ್ತಿರುವುದಕ್ಕೆ ಆಡಳಿತ ವ್ಯವಸ್ಥೆಯ ಕೋಮು ಓಲೈಕೆ ಕಾರಣವಾಗಿದೆ ಎಂದು ಉಡುಪಿ ಜಿಲ್ಲಾ ಬಿಜೆಪಿ ಯುವಮೋರ್ಚಾ ಅಧ್ಯಕ್ಷ ಪ್ರಥ್ವಿರಾಜ್ ಶೆಟ್ಟಿ ಬಿಲ್ಲಾಡಿ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ನಡೆದಿರುವ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು. ಹಾಗೆಯೇ ಲವ್ ಜಿಹಾದ್ ಹಾಗೂ ಡ್ರಾಗ್ಸ್ ಜಾಲವನ್ನು ಮಟ್ಟ ಹಾಕದಿದ್ದರೆ ಯುವಮೋರ್ಚಾ ಜಿಲ್ಲೆಯಾದ್ಯಂತ ಪ್ರತಿಭಟನೆ ನಡೆಸಲಿದೆ ಎಂದು ಯುವಮೋರ್ಚಾ ಅಧ್ಯಕ್ಷ ಪ್ರಥ್ವಿರಾಜ್ ಶೆಟ್ಟಿ ಬಿಲ್ಲಾಡಿ ತಿಳಿಸಿದ್ದಾರೆ.

- Advertisement -

Latest News

error: Content is protected !!