Thursday, June 4, 2026
Homeಕರಾವಳಿಮಂಗಳೂರುಸುಳ್ಯ; ನಾಪತ್ತೆಯಾಗಿದ್ದ ವೃದ್ಧೆಯ ಶವ ತೋಡಿನಲ್ಲಿ ಪತ್ತೆ

ಸುಳ್ಯ; ನಾಪತ್ತೆಯಾಗಿದ್ದ ವೃದ್ಧೆಯ ಶವ ತೋಡಿನಲ್ಲಿ ಪತ್ತೆ

- Advertisement -
- Advertisement -

ಸುಳ್ಯ; ನಾಪತ್ತೆಯಾಗಿದ್ದ ವೃದ್ಧೆಯ ಶವ ತೋಡಿನಲ್ಲಿ ಪತ್ತೆಯಾಗಿರುವ ಘಟನೆ ನಾರ್ಣಕಜೆ ಬಳಿಯ ಅಮರಪಡ್ನೂರು ಗ್ರಾಮದ ಕುಂಟಿಹಿತ್ಲುವಿನಲ್ಲಿ ನಡೆದಿದೆ.ಕೋಣಕಜೆ ಸೀತಮ್ಮ(85)ಮೃತ ದುರ್ದೈವಿ.

ಸೀತಮ್ಮ  ಅವರು ಆ.21 ರಂದು ನಾರ್ಣಕಜೆಗೆ ಹೋಗಿ ಬರುತ್ತೇನೆಂದು ಹೇಳಿ ಬೆಳಗ್ಗೆ 9 ಗಂಟೆಗೆ ತೆರಳಿದ್ದರು.ಆದರೆ ಅವರು ನಾರ್ಣಕಜೆಗೂ ಮನೆಗೂ ಹೋಗದೇ ಸಂಬಂಧಿಕರ ಮನೆಗೂ ಹೋಗದೇ ಕಾಣೆಯಾಗಿದ್ದರು. ಹೀಗಾಗಿ ಹುಡುಕಾಟ ಆರಂಭಿಸಿದ್ದರು. ಇದೀಗ ನಾರ್ಣಕಜೆ  ಬಳಿಯ ಕುಂಟಿಹಿತ್ಲು ಎಂಬಲ್ಲಿ ತೋಡಿನಲ್ಲಿ ಅವರ ಮೃತದೇಹ ಪತ್ತೆಯಾಗಿದೆ.ತೋಡು ದಾಟುವ ವೇಳೆ ಕಾಲು ಜಾರಿ ನೀರಿಗೆ ಬಿದ್ದು ಅವರು ಸಾವನ್ನಪ್ಪಿರಬಹುದು ಎಂದು ಶಂಕಿಸಲಾಗಿದೆ.

- Advertisement -

Latest News

error: Content is protected !!