Saturday, June 6, 2026
Homeಕರಾವಳಿಉಡುಪಿಉಡುಪಿಯ ಖಾಸಗಿ ಬಸ್‌ ಮಾಲಕರ ಮುಷ್ಕರ ಹಿಂದೆಗೆತ

ಉಡುಪಿಯ ಖಾಸಗಿ ಬಸ್‌ ಮಾಲಕರ ಮುಷ್ಕರ ಹಿಂದೆಗೆತ

- Advertisement -
- Advertisement -

ಉಡುಪಿ: ಹೆಜಮಾಡಿ ಹಾಗೂ ಸಾಸ್ತಾನ ಟೋಲ್‌ ಕೇಂದ್ರಗಳು ಬಸ್‌ಗಳ ಮೇಲೆ ಹೆಚ್ಚುವರಿ ಟೋಲ್‌ ದರ ವಿಧಿಸುತ್ತಿರುವ ವಿರುದ್ಧ ಆ.23ರಂದು ಮೌನ ಪ್ರತಿಭಟನೆಯನ್ನು ಕೈಗೊಳ್ಳಲು ಉದ್ದೇಶಿಸಿದ್ದು, ಇದೀಗ ಪ್ರತಿಭಟನೆಯನ್ನು ಕೆನರಾ ಬಸ್‌ ಮಾಲಕರ ಸಂಘವು ಹಿಂಪಡೆದಿದೆ.

ಪ್ರತಿಭಟನೆಯನ್ನು ಕೈ ಬಿಡಲಾಗಿರುವ ಮುಖ್ಯ ಉದ್ದೇಶ, ಪ್ರಸ್ತುತ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಆ. 19ರಂದು ಸದ್ಯಕ್ಕೆ ಹೆಚ್ಚುವರಿ ಶುಲ್ಕ ವಸೂಲಾತಿಯನ್ನು ಮುಂದಿನ ಆದೇಶದವರೆಗೆ ಸ್ಥಗಿತಗೊಳಿ ಸಿರುವುದಕ್ಕೆ ಎಂದು ತಿಳಿಸಲಾಗಿದೆ. ಒಂದು ವೇಳೆ ಮರಳಿ ಟೋಲ್ ಹೆಚ್ಚುವರಿ ವಿಧಿಸಿದರೆ ಮತ್ತೆ ಪ್ರತಿಭಟಿಸುವುದಾಗಿ ಸಂಘದ ಪ್ರಧಾನ ಕಾರ್ಯದರ್ಶಿ ಕುಯಿಲಾಡಿ ಸುರೇಶ್‌ ನಾಯಕ್‌ ತಿಳಿಸಿದ್ದಾರೆ.

ಇನ್ನು ಪ್ರತಿಭಟನೆಗೆ ಕೋರಿ ಸೋಮವಾರವಷ್ಟೇ ಸಂಸದ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಅಪರ ಜಿಲ್ಲಾಧಿಕಾರಿ ಮಮತಾ ದೇವಿ ಅವರಿಗೆ ಮನವಿ ಸಲ್ಲಿಸಲಾಗಿತ್ತು. ಪ್ರತಿಭಟನೆ ಬಗ್ಗೆ ಹೆದ್ದಾರಿ ಇಲಾಖೆಗೂ ಮಾಹಿತಿ ನೀಡಲಾಗಿತ್ತು.

- Advertisement -

Latest News

error: Content is protected !!