Sunday, June 7, 2026
Homeತಾಜಾ ಸುದ್ದಿಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ಕೊಡುವ ಪ್ರಮೇಯವೇ ಇಲ್ಲ; ಲಕ್ಷ್ಮೀ ಹೆಬ್ಬಾಳ್ಕರ್

ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ಕೊಡುವ ಪ್ರಮೇಯವೇ ಇಲ್ಲ; ಲಕ್ಷ್ಮೀ ಹೆಬ್ಬಾಳ್ಕರ್

- Advertisement -
- Advertisement -

ಬೆಳಗಾವಿ: ಮುಡಾ ಪ್ರಕರಣದ ಕುರಿತು ಸಿದ್ದರಾಮಯ್ಯ ಸಾಹೇಬರು ರಾಜೀನಾಮೆ ಕೊಡುವ ಪ್ರಮೇಯವೇ ಇಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿರುವುದು ರಾಜಕೀಯ ಪಿತೂರಿ ಅಜೆಂಡಾವಾಗಿದೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು.

ಅವರು ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಈಗಾಗಲೇ ತನಿಖೆ ನಡೆಯುತ್ತಿದ್ದು, ಈ ಕುರಿತಂತೆ ಇನ್ನೂ ರಿಸಲ್ಟ್ ಬಂದಿಲ್ಲ, ಅಷ್ಟರಲ್ಲಿ ಇದನ್ನು ದುರುಪಯೋಗ ಮಾಡುತ್ತಿದ್ದಾರೆ. ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ಧರಾಮಯ್ಯ ರಾಜೀನಾಮೆ ಕೊಡುವ ಪ್ರಮೇಯವಿಲ್ಲ, ಅಂತಹ ಅವಶ್ಯಕತೆಯೂ ಇಲ್ಲ. ಇದರಿಂದ ಸರ್ಕಾರದ ಮೇಲೆ ಏನೂ ತೊಂದರೆಯಾಗಲ್ಲ. ಇದು ರಾಜಕೀಯ ಎಂದು ಗೊತ್ತು, ನಾವು ರಾಜಕೀಯವಾಗಿ ಹೇಳುತ್ತೇವೆ. ಕರ್ನಾಟಕದಿಂದ ಈ ಪ್ರಕರಣದಲ್ಲಿ ತಕ್ಕ ಉತ್ತರ ಕೊಡುತ್ತೇವೆ, ಎಂದು ಕಿಡಿಕಾರಿದರು.

ಇನ್ನು ಯಡಿಯೂರಪ್ಪ ವಿಷಯದಲ್ಲಿ ಬಿಜೆಪಿಯವರು ಚೂರಿ ಹಾಕಿದ್ದಾರೆ. ಯಡಿಯೂರಪ್ಪ ಅವರನ್ನು ಬಿಜೆಪಿಯವರೇ ಜೈಲಿಗೆ ಕಳುಹಿಸಿದ್ದು. ಇದೀಗ ಬಿಜೆಪಿಯು ಸಿದ್ದರಾಮಯ್ಯ ಸಾಹೇಬರ ಮುಖಕ್ಕೆ ಮಸಿ ಬಳಿಯುವ ಕೆಲಸ ಮಾಡುತ್ತಿದೆ. ಅವರ ಕೈಗೆ ಮೊದಲು ಮಸಿ ಬಳಿದಿದ್ದನ್ನು ನೋಡಿಕೊಳ್ಳಬೇಕು, ಎಂದು ಹೆಬ್ಬಾಳ್ಕರ್‌ ತಿಳಿಸಿದರು. 

- Advertisement -

Latest News

error: Content is protected !!