Tuesday, July 1, 2025
Homeತಾಜಾ ಸುದ್ದಿವೈವಾಹಿಕ ಜೀವನಕ್ಕೆ ಕಾಲಿಟ್ಟ ನಟ ತರುಣ್ ಸುಧೀರ್ ಹಾಗೂ ಸೋನಲ್ ಮೊಂಥೆರೋ

ವೈವಾಹಿಕ ಜೀವನಕ್ಕೆ ಕಾಲಿಟ್ಟ ನಟ ತರುಣ್ ಸುಧೀರ್ ಹಾಗೂ ಸೋನಲ್ ಮೊಂಥೆರೋ

spot_img
- Advertisement -
- Advertisement -

ಬೆಂಗಳೂರು: ಕರಾವಳಿ ಬೆಡಗಿ ಸೋನಲ್ ಮೊಂಥೆರೋ ಹಾಗೂ ಸ್ಯಾಂಡಲ್ ವುಡ್ ನ ಖ್ಯಾತ ನಿರ್ದೇಶಕ ತರುಣ್ ಸುಧೀರ್ ಅವರು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.ನಿನ್ನೆ (ಆಗಸ್ಟ್ 10) ಬೆಂಗಳೂರಿನ ಪೂರ್ಣಿಮಾ ಪ್ಯಾಲೆಸ್‌ನಲ್ಲಿ ಇಬ್ಬರ ವಿವಾಹದ ಆರತಕ್ಷತೆ ಕಾರ್ಯಕ್ರಮ ನಡೆಯಿತು. ಸ್ಯಾಂಡಲ್ ವುಡ್ ನ ತಾರೆಯರು, ರಾಜಕೀಯ ಗಣ್ಯರು ಸೇರಿದಂತೆ ಸಾವಿರಾರು ಮಂದಿ ನವಜೋಡಿಗೆ ಶುಭಕೋರಿ ಶುಭ ಹಾರೈಸಿದರು.

ಬೆಂಗಳೂರಿನ ಮೈಸೂರು ರಸ್ತೆಯಲ್ಲಿರುವ ಪೂರ್ಣಿಮಾ ಪ್ಯಾಲೇಸ್‌ನಲ್ಲಿ ಅದ್ಧೂರಿಯಾಗಿ ಇಬ್ಬರ ವಿವಾಹ ಸಮಾರಂಭ ನಡೆಯಿತು. ಹಿಂದೂ ಸಂಪ್ರದಾಯದಂತೆ ಎರಡು ಕುಟುಂಬದ ಗುರು – ಹಿರಿಯರ ಸಮ್ಮುಖದಲ್ಲಿ ನವಜೋಡಿ ಹೊಸ ಜೀವನಕ್ಕೆ ಕಾಲಿಟ್ಟರು. ಬೆಳಗ್ಗೆ 10:50 ರಿಂದ 11:35 ಸಮಯದ ತುಲಾ ಲಗ್ನದಲ್ಲಿ ಮಾಂಗಲ್ಯ ಧಾರಣೆ ನೆರವೇರಿತು

ಇನ್ನು ಸ್ಟಾರ್ ಗಳ ವಿವಾಹ ಸಮಾರಂಭದಲ್ಲಿ ಹಿರಿಯ ನಟಿ ಶ್ರುತಿ, ಸುಧಾರಾಣಿ,‌ ಮಾಳವಿಕ ಅವಿನಾಶ್‌, ನಟ ಅವಿನಾಶ್‌, ಮೇಘನಾ ಗಾಂವ್ಕರ್‌, ಪ್ರೇಮ್‌, ಅಮೃತಾ ಪ್ರೇಮ್, ನಟಿ ನಿಶ್ವಿಕಾ ನಾಯ್ಡು, ನಟಿ ಆಶಿಕಾ ರಂಗನಾಥ್‌, ನಟ ಸಾಧುಕೋಕಿಲಾ, ಸಂಗೀತ ನಿರ್ದೇಶಕ ವಿ.ಹರಿಕೃಷ್ಣ,ತೆಲುಗು ನಟ ಜಗಪತಿ ಬಾಬು, ನಟ ಶರಣ್‌, ಗೋಲ್ಡನ್‌ ಸ್ಟಾರ್‌ ಗಣೇಶ್‌, ನಟ ವಿನೋದ್‌ ರಾಜ್, ಗಾಯಕ ಚೇತನ್‌, ಗಾಯಕ ವಿಜಯ್‌ ಪ್ರಕಾಶ್ ಸೇರಿದಂತೆ ಹಲವು ಸ್ಯಾಂಡಲ್‌ ವುಡ್‌ ತಾರೆಯರು ಸೇರಿದಂತೆ ವಿವಿಧ ಕ್ಷೇತ್ರದ ಗಣ್ಯರು ಭಾಗಿಯಾಗಿದ್ದರು.

- Advertisement -
spot_img

Latest News

error: Content is protected !!