Wednesday, June 3, 2026
Homeಅಪರಾಧಬಂಟ್ವಾಳ ಬೈಪಾಸ್ ಜಂಕ್ಷನ್‌ನಲ್ಲಿ ಹೊಡೆದಾಟ ಪ್ರಕರಣ; ಮೂವರು ಆರೋಪಿಗಳ ಬಂಧನ

ಬಂಟ್ವಾಳ ಬೈಪಾಸ್ ಜಂಕ್ಷನ್‌ನಲ್ಲಿ ಹೊಡೆದಾಟ ಪ್ರಕರಣ; ಮೂವರು ಆರೋಪಿಗಳ ಬಂಧನ

- Advertisement -
- Advertisement -

ಬಂಟ್ವಾಳ: ಇಲ್ಲಿನ ಬೈಪಾಸ್ ಜಂಕ್ಷನ್‌ನಲ್ಲಿ ಎರಡು ತಂಡಗಳು ಆ. 4ರಂದು ಸಂಜೆ ಹೊಡೆದಾಟ ಹಾಗೂ ಚೂರಿ ಇರಿತ ಮಾಡಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿ ಬಂಟ್ವಾಳ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

ಆರೋಪಿಗಳಿಗಾಗಿ ಬಂಟ್ವಾಳ ನಗರ ಇನ್ಸ್ಪೆಕ್ಟರ್ ಅನಂತ ಪದ್ಮನಾಭ, ಪಿಎಸ್‌ಐ ರಾಮಕೃಷ್ಣ ನೇತೃತ್ವದ ತಂಡ ತನಿಖೆ ನಡೆಸುತ್ತಿದ್ದು, ಇದೀಗ ಆರೋಪಿಗಳಾದ ಅಶ್ವಥ್, ಶರಣ್ ಹಾಗೂ ವಸಂತ ಅವರನ್ನು ಬಂಧಿಸಿದ್ದಾರೆ.

ಇನ್ನು ಹರೀಶ ಪೂಜಾರಿ, ವಿನೀತ್ ಹಾಗೂ ಪೃಥ್ವಿರಾಜ್ ಅವರು ಆರೋಪಿಗಳಿಂದ ಹಲ್ಲೆ ಹಾಗೂ ಚೂರಿ ಇರಿತಕ್ಕೊಳಗಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಘಟನೆಯ ವಿವರ: ಆ. 4ರಂದು ಸಂಜೆ ಬಂಟ್ವಾಳ ಜಂಕ್ಷನ್ ನಲ್ಲಿ ಹರೀಶ್ ಪೂಜಾರಿ ಅವರಿದ್ದು, ಪರಿಚಿತ ಆರೋಪಿಗಳು ಎರಡು ಕಾರು ಹಾಗೂ ಬೈಕಿನಲ್ಲಿ ಬಂದು ಅವಾಚ್ಯ ಶಬ್ದಗಳಿಂದ ಬೈದಿದ್ದು, ಈ ವೇಳೆ ಅಕ್ಷೇಪಿಸಿದಾಗ ಹಲ್ಲೆ ನಡೆಸಿದ್ದಾರೆ. ಹರೀಶ್ ಅವರ ಬೊಬ್ಬೆ ಕೇಳಿ ಸ್ಥಳಕ್ಕೆ ಸ್ನೇಹಿತರಾದ ಕೀರ್ತನ್, ಪೃಥ್ವಿರಾಜ್ ಹಾಗೂ ವಿನೀತ್ ಅವರು ಓಡಿ ಬಂದು ಹಲ್ಲೆ ತಡೆಯಲು ಮುಂದಾಗಿದ್ದು, ಆರೋಪಿಗಳು ಅವರಿಗೂ ಹಲ್ಲೆ ನಡೆಸಿದ್ದಾರೆ.

ಈ ಸಂದರ್ಭದಲ್ಲಿ ಆರೋಪಿಗಳ ಪೈಕಿ ಅಶ್ವತ್ ಎಂಬಾತ ವಿನೀತ್‌ನಿಗೆ ಹಾಗೂ ಮತ್ತೋರ್ವ ಆರೋಪಿ ಶರಣ್ ಎಂಬಾತ ಪೃಥ್ವಿರಾಜ್‌ನಿಗೆ ತಿವಿದಿದ್ದಾನೆ. ಈ ವೇಳೆ ಸಾರ್ವಜನಿಕರು ಹಾಗೂ ಪರಿಚಿತರು ಸೇರಿದನ್ನು ನೊಡಿದ ಆರೋಪಿಗಳು ಹಲ್ಲೆ ನಡೆಸಿದ ಚೂರಿಗಳೊಂದಿಗೆ ಅವರು ಬಂದಿದ್ದ ವಾಹನಗಳಲ್ಲಿ ಪರಾರಿಯಾಗಿದ್ದರು. ಬಂಟ್ವಾಳ ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.

- Advertisement -

Latest News

error: Content is protected !!