- Advertisement -


- Advertisement -
ಕಡಬ: ಇದ್ದಕ್ಕಿದ್ದಂತೆ ಅನಾರೋಗ್ಯದಿಂದ ಆಟೋ ಚಾಲಕ ನಿಧನವಾಗಿರುವ ಘಟನೆ ಕಡಬ ತಾಲೂಕಿನ ಹಳೆನೇರಂಕಿ ಎಂಬಲ್ಲಿ ನಡೆದಿದೆ. ಹಳೆನೇರಂಕಿ ಗ್ರಾಮದ ಮುಳಿಮಜಲು ನಿವಾಸಿ, ಆಟೋ ಚಾಲಕ ಸೂರಪ್ಪಗೌಡ (60) ಮೃತ ದುರ್ದೈವಿ.
ಸೂರಪ್ಪಗೌಡ ಅವರಿಗೆ ಅವರು ಮನೆಯಲ್ಲಿದ್ದ ವೇಳೆ ಅನಾರೋಗ್ಯ ಕಾಣಿಸಿಕೊಂಡಿದೆ. ಕೂಡಲೇ ಅವರನ್ನು ಆಲಂಕಾರಿನ ಖಾಸಗಿ ಕ್ಲಿನಿಕ್ ಗೆ ಕರೆದುಕೊಂಡು ಹೋಗಲಾಗಿದೆ.ಅಲ್ಲಿ ಪರೀಕ್ಷಿಸಿ ಬೇರೆ ಆಸ್ಪತ್ರೆಗೆ ಕರೆದೊಕೊಂಡು ಹೋಗುವಂತೆ ತಿಳಿಸಿದ್ದಾರೆ. ಅಲ್ಲಿಂದ ಪುತ್ತೂರು ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ.ಅಷ್ಟರಲ್ಲಿ ಅವರು ಸಾವನ್ನಪ್ಪಿದ್ದರು ಎನ್ನಲಾಗಿದೆ. ಈ ಬಗ್ಗೆ ಅವರ ಪುತ್ರ ಶ್ರೀಕಾಂತ್ ನೀಡಿದ ದೂರಿನಂಕೆ ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
- Advertisement -


