Thursday, June 4, 2026
Homeಕರಾವಳಿಉಡುಪಿಹಿರಿಯಡ್ಕ: ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಎಂಎಸ್ಸಿ ವಿದ್ಯಾರ್ಥಿನಿ

ಹಿರಿಯಡ್ಕ: ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಎಂಎಸ್ಸಿ ವಿದ್ಯಾರ್ಥಿನಿ

- Advertisement -
- Advertisement -

ಹಿರಿಯಡ್ಕ: ಖಿನ್ನತೆಯಿಂದ ಬಳಲುತ್ತಿದ್ದ ಎಂಎಸ್ಸಿ ವಿಧ್ಯಾರ್ಥಿನಿಯೋರ್ವಳು ಮನೆಯ ಮುಂಭಾಗದ ಬಾವಿಗೆ ಹಾರಿ ಆತ್ಮಹತ್ಯೆಗೆ ಶರಣಾದ ಘಟನೆ ಉಡುಪಿ ಜಿಲ್ಲೆಯ ಹಿರಿಯಡ್ಕದ ಬೊಮ್ಮರಬೆಟ್ಟುವಿನಲ್ಲಿ ನಡೆದಿದೆ.

ಬೊಮ್ಮರಬೆಟ್ಟು ಗ್ರಾಮದ ರಮೇಶ್ ನಾಯ್ಕರವರ ಪುತ್ರಿ ಸೌಮ್ಯ(22) ಆತ್ಮಹತ್ಯೆ ಮಾಡಿಕೊಂಡವರು.

ಕಳೆದ ಒಂದು ತಿಂಗಳಿನಿಂದ ಖಿನ್ನತೆಯಿಂದ ಬಳಲುತ್ತಿದ್ದ ಇವರು ಚಿಕಿತ್ಸೆಯನ್ನು ಪಡೆಯುತ್ತಿದ್ದರೂ ಗುಣಮುಖರಾಗಿರಲಿಲ್ಲ ಎನ್ನಲಾಗಿದೆ. ಹಿರಿಯಡ್ಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!