Tuesday, June 30, 2026
Homeಕರಾವಳಿದ.ಕ: ಕೊರೋನಾಗೆ 35 ವರ್ಷದ ಯುವಕ ಬಲಿ, ಸಾವಿನ ಸಂಖ್ಯೆ 31ಕ್ಕೆ ಏರಿಕೆ

ದ.ಕ: ಕೊರೋನಾಗೆ 35 ವರ್ಷದ ಯುವಕ ಬಲಿ, ಸಾವಿನ ಸಂಖ್ಯೆ 31ಕ್ಕೆ ಏರಿಕೆ

- Advertisement -
- Advertisement -

ಮಂಗಳೂರು: ಕರಾವಳಿ ಜಿಲ್ಲೆ ದಕ್ಷಿಣ ಕನ್ನಡದಲ್ಲಿ ಇಂದು ಮುಂಜಾನೆ ಕೋವಿಡ್ ಸೋಂಕಿತ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದು, ಈ ಮೂಲಕ ಕೋವಿಡ್ ಸೋಂಕಿನಿಂದ ಮೃತರ ಸಂಖ್ಯೆ 32ಕ್ಕೆ ಏರಿಕೆಯಾಗಿದೆ.

ಮಂಗಳೂರು ಹೊರವಲಯದ ಹೊಸಬೆಟ್ಟು ನಿವಾಸಿ 35 ವರ್ಷದ ಯುವಕ ಕೋವಿಡ್ ಸೋಂಕಿನ ಕಾರಣದಿಂದ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಮರಣ ಹೊಂದಿದ್ದಾನೆ.

ಜಿಲ್ಲೆಯಲ್ಲಿ ನಿನ್ನೆ ಇಬ್ಬರು ಸೋಂಕಿತರು ಸಾವನ್ನಪ್ಪಿದ್ದರು. ಗುರುವಾರ ಜಿಲ್ಲೆಯಲ್ಲಿ 167 ಮಂದಿಗೆ ಕೋವಿಡ್ ಸೋಂಕು ದೃಢವಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 1709ಕ್ಕೆ ಏರಿಕೆ ಕಂಡಿದೆ.

- Advertisement -

Latest News

error: Content is protected !!