Saturday, June 6, 2026
Homeಕರಾವಳಿಉಡುಪಿಬೆಂಗಳೂರಿನಲ್ಲಿ ಪರಶುರಾಮನ ಪ್ರತಿಮೆಯ ಬಿಡಿಭಾಗಗಳ ಜಪ್ತಿ

ಬೆಂಗಳೂರಿನಲ್ಲಿ ಪರಶುರಾಮನ ಪ್ರತಿಮೆಯ ಬಿಡಿಭಾಗಗಳ ಜಪ್ತಿ

- Advertisement -
- Advertisement -

ಕಾರ್ಕಳ: ಕಾರ್ಕಳದ ಬೈಲೂರು ಉಮಿಕ್ಕಳ ಬೆಟ್ಟದ ಮೇಲಿನ ಪರಶುರಾಮ ಥೀಂ ಪಾರ್ಕ್‌ ವಿವಾದ ಮತ್ತೆ ಮುನ್ನೆಲೆಗೆ ಬಂದಿದ್ದು,  ಪೊಲೀಸರು ಪರಶುರಾಮನ ಪ್ರತಿಮೆಯ ಬಿಡಿಭಾಗಗಳನ್ನು ವಶಕ್ಕೆ ಪಡೆದು ಕಾರ್ಯಾಚರಣೆ ಮಾಡುತ್ತಿದ್ದಾರೆ.  

ಪ್ರಕರಣದ ತನಿಖೆ ಸಂಬಂಧ  ನಕಲಿ ಪ್ರತಿಮೆ ಎನ್ನುವ ದೂರಿನ ಹಿನ್ನಲೆಯಲ್ಲಿ, ಕಾರ್ಕಳ ನಗರ ಠಾಣೆ ಪೊಲೀಸರು ಆ.3ರಂದು ಪರಶುರಾಮ ಪ್ರತಿಮೆ ನಿರ್ಮಿಸಿದ ಕ್ರಿಷ್‌ ಆರ್ಟ್‌ ವರ್ಲ್ಡ್ ಮಾಲಕ ಕೃಷ್ಣ ನಾಯ್ಕ ಅವರಿಗೆ ಸೇರಿದ ಬೆಂಗಳೂರಿನ ಕೆಂಗೇರಿ ಬಳಿಯ ಗೋಡೌನ್‌ನಲ್ಲಿ ಸ್ಥಳ ಮಹಜರು ನಡೆಸಿ ಮೂರ್ತಿಯ ಸೊಂಟದ ಮೇಲಿನ ಸುಮಾರು 9 ಪ್ರಕರಣದ ತನಿಖೆ ಸಂಬಂಧ ಟನ್‌ ತೂಕದ ಪ್ರತಿಮೆಯ ಬಿಡಿಭಾಗಗಳನ್ನು ವಶಕ್ಕೆ ಪಡೆದು ಕಾರ್ಕಳಕ್ಕೆ ತಂದಿದ್ದಾರೆ.

ಇನ್ನು ಪೊಲೀಸರು ಸ್ಥಳ ತನಿಖೆಗೆ ತೆರಳಿದ ಸಂದರ್ಭದಲ್ಲಿ ಶಿಲ್ಪಿ ಕೃಷ್ಣ ನಾಯ್ಕ ಅವರು ಫೇಸ್‌ಬುಕ್‌ ಲೈವ್‌ಗೆ ಬಂದು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ಯಾವುದೇ ನೊಟೀಸ್‌ ನೀಡದೆ ಮೂರ್ತಿಯ ಭಾಗಗಳನ್ನು ಎತ್ತಿಕೊಂಡ ಅನ್ಯ ಮತೀಯ ವ್ಯಕ್ತಿಗಳು ಬಿಡಿಭಾಗಗಳನ್ನು ಅಸುರಕ್ಷಿತವಾಗಿ ತೆಗೆದುಕೊಂಡು ಹೋಗಿದ್ದಾರೆ ಎಂದು ಈ ಸಂದರ್ಭದಲ್ಲಿ ತಿಳಿಸಿದ್ದಾರೆ. 

ಇದೇ ಸಂದರ್ಭದಲ್ಲಿ ಶಿಲ್ಪಿಯ ಮನೆಗೆ ತೆರಳಿದ ಕಾರ್ಕಳ ಕಾಂಗ್ರೆಸ್‌ ಮುಖಂಡ ಉದಯಕುಮಾರ್‌ ಶೆಟ್ಟಿ ಮುನಿಯಾಲು ದಬ್ಟಾಳಿಕೆ ನಡೆಸಿ, ಜಾತಿ ಹೆಸರಲ್ಲಿ ಅವಮಾನಿಸಿದ ಬಗ್ಗೆಯೂ ಹೇಳಿ ಕೊಂಡಿದ್ದಾರೆ. ಪೊಲೀಸರೂ ದೌರ್ಜನ್ಯ ಎಸಗಿದ್ದಾರೆಂದು ಶಿಲ್ಪಿ ದೂರಿದ್ದಾರೆ.

- Advertisement -

Latest News

error: Content is protected !!