Thursday, June 4, 2026
Homeಕರಾವಳಿಬೈಕಂಪಾಡಿಯಲ್ಲಿ ಕಂಪೆನಿಗಳಿಗೆ ನುಗ್ಗಿದ ನೆರೆನೀರು

ಬೈಕಂಪಾಡಿಯಲ್ಲಿ ಕಂಪೆನಿಗಳಿಗೆ ನುಗ್ಗಿದ ನೆರೆನೀರು

- Advertisement -
- Advertisement -

ಬೈಕಂಪಾಡಿ: ಜಿಲ್ಲೆಯಾದ್ಯಂತ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಕೈಗಾರಿಕೆ ಪ್ರದೇಶವಾದ “ಮುಂಗಾರು’’ ಬಳಿಯ ಅಡ್ಡ ರಸ್ತೆ 22, 23ರಲ್ಲಿರುವ ವಿದೇಶಗಳಿಗೆ ರಫ್ತು ಮಾಡುವ ಯಂತ್ರಗಳ ಯೂನಿಟ್‌, ಆಹಾರ ಸಂಸ್ಕರಣೆ ಯೂನಿಟ್‌ಗಳಿಗೆ ಸತತ ಮೂರು ದಿನಗಳಿಂದ ಪ್ರವಾಹ ನುಗ್ಗಿದ್ದು, ಕೋಟ್ಯಂತರ ರೂ. ನಷ್ಟ ಅನುಭವಿಸುವಂತಾಗಿದೆ.

ಇಲ್ಲಿ ವಿದ್ಯುತ್‌ ಸಂಪರ್ಕವನ್ನು ಕೂಡ ನೆರೆಯ ಹಿನ್ನೆಲೆಯಲ್ಲಿ ಸ್ಥಗಿತಗೊಳಿಸಲಾಗಿದೆ. ಇದರಿಂದ ಉತ್ಪಾದನ ಚಟುವಟಿಕೆಗೂ ನಷ್ಟವಾಗಿದೆ.

ಹಾಳಾದ ಸರಕಿನ ಮೌಲ್ಯವನ್ನು ಅಂದಾಜಿಸಲಾಗುತ್ತಿದ್ದು, ಕಾರ್ಮಿಕರು ಕೆಲಸವಿಲ್ಲದೆ ನೆರೆಯಲ್ಲಿ ಮುಳುಗಿದ ತಮ್ಮ ಕೊಠಡಿಗಳಿಂದ ಸ್ಥಳಾಂತರವಾಗುತ್ತಿದ್ದಾರೆ.

- Advertisement -

Latest News

error: Content is protected !!