Sunday, June 7, 2026
Homeಕರಾವಳಿಸುಬ್ರಹ್ಮಣ್ಯ: ನೆಟ್ಟಣ ರೈಲ್ವೇ ಸಿಬ್ಬಂದಿಗೆ ಕೊರೋನಾ ಪಾಸಿಟಿವ್

ಸುಬ್ರಹ್ಮಣ್ಯ: ನೆಟ್ಟಣ ರೈಲ್ವೇ ಸಿಬ್ಬಂದಿಗೆ ಕೊರೋನಾ ಪಾಸಿಟಿವ್

- Advertisement -
- Advertisement -

ಕಡಬ: ತಾಲೂಕಿನ ಸುಬ್ರಹ್ಮಣ್ಯದ ನೆಟ್ಟಣ ರೈಲ್ವೆ ನಿಲ್ದಾಣದಲ್ಲಿ ಕಾರ್ಯನಿರ್ವಹಿಸುತ್ತಿದ್ದ 22ವರ್ಷ ಪ್ರಾಯದ ರೈಲ್ವೆ ಇಲಾಖೆಯ ಸಿಬ್ಬಂದಿಯೋರ್ವರಿಗೆ ಕೊರೋನಾ ಪಾಸಿಟಿವ್ ಬಂದಿದೆ.

15 ದಿನಗಳ ಹಿಂದೆ ಬಿಹಾರದಿಂದ ಬಂದ ರೈಲ್ವೇ ಸಿಬ್ಬಂದಿ ಇಲ್ಲಿ ಕ್ವಾರಂಟೈನ್ ಒಳಗಾಗಿದ್ದರು, ಈ ವೇಳೆ ಅವರ ಗಂಟಲ ದ್ರವ ಮಾದರಿಯನ್ನು ಪರೀಕ್ಷೆಗೊಳಪಡಿಸಿದ್ದು ಅದರ ವರದಿ ಇಂದು ಪಾಸಿಟಿವ್ ಬಂದಿದೆ.

ಈ ಹಿನ್ನಲೆಯಲ್ಲಿ ರೈಲ್ವೇ ಕ್ವಾಟ್ರಸ್ ಹಾಗೂ ಅವರು ಭೇಟಿ ನೀಡಿದ ನೆಟ್ಟಣದ ಅಲಂಕಾರ್ ಜನರಲ್ ಸ್ಟೋರ್ ನ್ನು ಅಧಿಕಾರಿಗಳು ಸೀಲ್ ಡೌನ್ ಮಾಡಿದ್ದಾರೆ.

ಕಡಬ ಎ.ಎಸ್.ಐ.ಸುರೇಶ್, ಆರೋಗ್ಯ ಸಹಾಯಕಿ ಮಾಲತಿ, ಗ್ರಾಮಕರಣಿಕ ಶ್ರೀರಾಜ್ ಸಹಾಯಕ ಶ್ರೀನಿವಾಸ, ಪಂಚಾಯತ್ ಸಿಬ್ಬಂದಿ ಶೇಷಪ್ಪ ಸ್ಥಳಕ್ಕೆ ತೆರಳುಸೀಲ್ ಡೌನ್ ಮಾಡಿ ಕೊರೋನಾ ಸೋಂಕಿತ ಯುವಕನನ್ನು ಆಸ್ಪತ್ರೆ ಗೆ ಕಳುಹಿಸಿಕೊಟ್ಟಿದ್ದಾರೆ.

- Advertisement -

Latest News

error: Content is protected !!