Thursday, June 25, 2026
Homeಕರಾವಳಿಮಂಗಳೂರುಭೂಕುಸಿತದ ಎಫೆಕ್ಟ್; ಮಂಗಳೂರು-ಬೆಂಗಳೂರು ವಿಮಾನಯಾನ ದುಬಾರಿ

ಭೂಕುಸಿತದ ಎಫೆಕ್ಟ್; ಮಂಗಳೂರು-ಬೆಂಗಳೂರು ವಿಮಾನಯಾನ ದುಬಾರಿ

- Advertisement -
- Advertisement -

ಮಂಗಳೂರು: ಬೆಂಗಳೂರು – ಮಂಗಳೂರು ರೈಲು ಮಾರ್ಗದಲ್ಲಿ ಭೂ ಕುಸಿತ, ಶಿರಾಡಿ ಘಾಟ್ ಮತ್ತು ಚಾರ್ಮಾಡಿ ಘಾಟ್ ನಲ್ಲಿ ಆಗಾಗ ಭೂ ಕುಸಿತ ಹಿನ್ನೆಲೆಯಲ್ಲಿ ವಿಮಾನ ಟಿಕೆಟ್ ದರ ಏರಿಕೆಯಾಗಿದೆ.

ಮಂಗಳೂರು ಮತ್ತು ಬೆಂಗಳೂರು ನಡುವಿನ ವಿಮಾನಯಾನ ದರ ಮೂರರಿಂದ ನಾಲ್ಕು ಪಟ್ಟು ನಷ್ಟು ಹೆಚ್ಚಳವಾಗಿದ್ದು, ನಿನ್ನೆ ಸಂಜೆ ಮಂಗಳೂರಿನಿಂದ ಬೆಂಗಳೂರಿಗೆ ತೆರಳುವ ವಿಮಾನದ ಟಿಕೆಟ್ ದರ 9,143 ರೂಪಾಯಿ ಆಗಿತ್ತು

ಉಳಿದ ದಿನಗಳಲ್ಲಿ 3000 ರೂಪಾಯಿಯಿಂದ 3,600 ರೂಪಾಯಿಯಷ್ಟು ಇರುತ್ತಿದ್ದ ಟಿಕೆಟ್ ದರದಲ್ಲಿ ಭಾರೀ ಪ್ರಮಾಣದಲ್ಲಿ ಏರಿಕೆ ಮಾಡಲ್ಪಟ್ಟಿದೆ.

ವಾರಾಂತ್ಯದಲ್ಲಿ ಟಿಕೆಟ್ ದರ ಇನ್ನಷ್ಟು ಹೆಚ್ಚಳವಾಗುವುದು ನಿಶ್ಚಿತವಾಗಿದ್ದು, ವಿಮಾನಯಾನ ಕಂಪನಿಗಳ ದರ ಏರಿಕೆ ನಿರ್ಧಾರಕ್ಕೆ ಪ್ರಯಾಣಿಕರಿಂದ ಅಸಮಾಧಾನ ವ್ಯಕ್ತವಾಗಿದೆ.

ಮಂಗಳೂರು – ಬೆಂಗಳೂರು ಮಾರ್ಗದ ರೈಲು ಹಳಿಯ ಮೇಲೆ ಭೂ ಕುಸಿತವಾಗಿ ಮಣ್ಣು ಬಿದ್ದಿದ್ದು, ತೆರವು ಕಾರ್ಯ ಇನ್ನೂ ಮುಂದುವರಿದಿದೆ.

- Advertisement -

Latest News

error: Content is protected !!