- Advertisement -
![]()
- Advertisement -
ಮಂಗಳೂರು: ವಿಧಾನಸಭೆಯಲ್ಲಿ ಸ್ಪೀಕರ್ ಪೀಠದ ಎದುರು ಕಾಂಗ್ರೆಸ್ ನಾಯಕರ ಜೊತೆಗೆ ಫೋಟೋ ತೆಗೆದುಕೊಂಡಿರುವುದು ಅಧಿವೇಶನ ನಡೆಯುತ್ತಿದ್ದ ವೇಳೆಯಲ್ಲಿ ಅಲ್ಲ ಎಂದು ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಸ್ಪಷ್ಟಪಡಿಸಿದ್ದಾರೆ.
ಮಂಗಳೂರಿನಲ್ಲಿ ಇಂದು ಪ್ರತಿಕ್ರಿಯೆ ನೀಡಿದ ಸ್ಪೀಕರ್ ಖಾದರ್, ಅಧಿವೇಶನ ನಡೆಯುವ ಮೊದಲು ರಾತ್ರಿ
ನಾನು ಮೈಕ್ ಚೆಕ್ ಮಾಡಲು ಹೋಗಿದ್ದಾಗ ಮಂಗಳೂರಿನ ಮಾಜಿ ಮೇಯರ್ ಒಬ್ಬರು ತೆಗೆದ ಫೋಟೋ ಎಂದು ಹೇಳಿದ್ದಾರೆ.
ವಿಧಾನಸೌಧಕ್ಕೆ ಅತಿಥಿಗಳು, ವಿದ್ಯಾರ್ಥಿಗಳು ಬಂದಾಗಲೂ ಅಲ್ಲೇ ಫೋಟೋ ತೆಗೆಯುತ್ತೇವೆ, ಇದರಲ್ಲಿ ತಪ್ಪು ಹುಡುಕುವ ಪ್ರಯತ್ನ ಬೇಡ, ಫೋಟೋ ತೆಗೆಯಬಾರದು ಅಂತ ಇಲ್ಲ ಎಂದು ಖಾದರ್ ಸ್ಪಷ್ಟಪಡಿಸಿದ್ದಾರೆ.
ಮುಂಗಾರು ಅಧಿವೇಶನದ ಸಮಯದಲ್ಲಿ ಮಂಗಳೂರು ಮಹಾನಗರ ಪಾಲಿಕೆ ಮಾಜಿ ಮೇಯರ್ ಕೆ. ಅಶ್ರಫ್ ಮತ್ತು ಹಾಲಿ ವಿಪಕ್ಷ ನಾಯಕ ನವೀನ್ ಡಿಸೋಜ ವಿಧಾನಸಭೆಯಲ್ಲಿ ಸ್ಪೀಕರ್ ಪೀಠದ ಬಳಿ ತೆಗೆಸಿಕೊಂಡಿದ್ದ ಫೋಟೋಗಳು ವಿವಾದಕ್ಕೆ ಕಾರಣವಾಗಿದ್ದವು.
- Advertisement -


