Friday, June 5, 2026
Homeಕರಾವಳಿಮಂಗಳೂರುಬಂಟ್ವಾಳ :ದೇವರಿಗೂ ತಪ್ಪಲಿಲ್ಲ ಕಳ್ಳರ ಕಾಟ; ದೇಗುಲಕ್ಕೆ ನುಗ್ಗಿ ಲಕ್ಷಾಂತರ ರೂಪಾಯಿ ಮೌಲ್ಯದ ನಗ ನಗದು...

ಬಂಟ್ವಾಳ :ದೇವರಿಗೂ ತಪ್ಪಲಿಲ್ಲ ಕಳ್ಳರ ಕಾಟ; ದೇಗುಲಕ್ಕೆ ನುಗ್ಗಿ ಲಕ್ಷಾಂತರ ರೂಪಾಯಿ ಮೌಲ್ಯದ ನಗ ನಗದು ಕಳವು

- Advertisement -
- Advertisement -

ಬಂಟ್ವಾಳ : ದೇವರಿಗೂ ತಪ್ಪಲಿಲ್ಲ ಕಳ್ಳರ ಕಾಟ ಎಂಬಂತಾಗಿದೆ ಬಂಟ್ವಾಳದಲ್ಲಿ ದೇವಸ್ಥಾನವೊಂದರಲ್ಲಿ ನಡೆದ ಕಳ್ಳತನ ಪ್ರಕರಣ.

 ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣಾ ವ್ಯಾಪ್ತಿಯ ಮೂಡು ನಡುಗೋಡು ಗ್ರಾಮದ ಕರೆಂಕಿ ಎಂಬಲ್ಲಿ ಇರುವ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಹಿಂಬಾಗಿಲು ತೆರದು ಗರ್ಭಗುಡಿಗೆ ನುಗ್ಗಿದ ಕಳ್ಳರು ಗರ್ಭಗುಡಿಯಲ್ಲಿದ್ದ ದೇವರ ಮೂರ್ತಿಗೆ ಧರಿಸಿದ್ದ ಚಿನ್ನದ ಕರಿಮಣಿ ಸರ ಹಾಗೂ ಡಬ್ಬಿಯಲ್ಲಿದ್ದ ಹಣ ಕದ್ದಿದ್ದಾರೆ.

ಸುಮಾರು 2.5 ಪವನ್ ತೂಕದ ಚಿನ್ನದ ಕರಿಮಣಿ ಮತ್ತು ದೇವಸ್ಥಾನದ ಒಳಾಂಗಣದಲ್ಲಿದ್ದ ಕಾಣಿಕೆ ಡಬ್ಬಿಯಿಂದ ಅಂದಾಜು ರೂ.2000 ನಗದು ಕಳ್ಳತನ ಮಾಡಿದ್ದಾರೆ. ಕಳವಾಗಿರವ ಸೊತ್ತಿನ ಮೌಲ್ಯ ರೂಪಾಯಿ 1.42 ಲಕ್ಷ ಎಂದು ಅಂದಾಜಿಸಲಾಗಿದೆ.

ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿದ್ದು, ಠಾಣಾ ನಿರೀಕ್ಷಕ ಶಿವಕುಮಾರ್ ಹಾಗೂ ಎಸ್.ಐ. ಹರೀಶ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

- Advertisement -

Latest News

error: Content is protected !!