Friday, June 5, 2026
Homeಕರಾವಳಿಬಂಟ್ವಾಳ; ಜೆ. ಎಂ. ಎಫ್. ಸಿ. ನ್ಯಾಯಾಲಯದ ಆವರಣದಲ್ಲಿ ಹೊಸದಾಗಿ ಜಾರಿಗೆ ತಂದ ಮೂರು ಕಾನೂನುಗಳ...

ಬಂಟ್ವಾಳ; ಜೆ. ಎಂ. ಎಫ್. ಸಿ. ನ್ಯಾಯಾಲಯದ ಆವರಣದಲ್ಲಿ ಹೊಸದಾಗಿ ಜಾರಿಗೆ ತಂದ ಮೂರು ಕಾನೂನುಗಳ ಬಗ್ಗೆ ಕಾರ್ಯಗಾರ

- Advertisement -
- Advertisement -

ಬಂಟ್ವಾಳ; ಜೆ. ಎಂ. ಎಫ್. ಸಿ. ನ್ಯಾಯಾಲಯದ ಆವರಣದಲ್ಲಿ ವಕೀಲರ ಸಂಘ (ರಿ), ಬಂಟ್ವಾಳ, ಅಧಿವಕ್ತ ಪರಿಷತ್ ಕರ್ನಾಟಕ- ದಕ್ಷಿಣ ಪ್ರಾoತ -ದಕ್ಷಿಣ ಕನ್ನಡ ಜಿಲ್ಲೆ – ಬಂಟ್ವಾಳ ಘಟಕ ಇದರ ಸಹಯೋಗದಲ್ಲಿ ಹೊಸದಾಗಿ ಜಾರಿಗೆ ತಂದ ಮೂರು ಕಾನೂನುಗಳ ಬಗ್ಗೆ ಕಾರ್ಯಗಾರವನ್ನು ಇಂದು(ಜುಲೈ 27)  ಹಮ್ಮಿಕೊಳ್ಳಲಾಗಿತ್ತು.

ಮಂಗಳೂರಿನ ಹಿರಿಯ ವಕೀಲರಾದ ಪರಮೇಶ್ವರ ಜೋಯಿಷ ರು ಹೊಸ ಮೂರು ಕಾನೂನು ಗಳ ಬಗ್ಗೆ ಸಂವಾದ ಕಾರ್ಯಕ್ರಮವನ್ನು ನಡೆಸಿದರು. ಕಾರ್ಯಕ್ರಮವನ್ನು ದೀಪ ಬೆಳಗಿಸುವುದರ ಮೂಲಕ ಬಂಟ್ವಾಳದ ಹಿರಿಯ ಸಿವಿಲ್ ನ್ಯಾಯಾಧೀಶರಾದ ಭಾಗ್ಯಮ್ಮ ರವರು ಚಾಲನೆಯನ್ನು ನೀಡಿದರು. ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಬಂಟ್ವಾಳದ ಪ್ರದಾನ ಸಿವಿಲ್ ನ್ಯಾಯಾಧೀಶರಾದ  ಚಂದ್ರಶೇಖರ ವೈ ತಳವಾರ ಮತ್ತು ಹೆಚ್ಚುವರಿ ಸಿವಿಲ್ ಮತ್ತು ಜೆ ಎಂ ಎಫ್ ಸಿ ನ್ಯಾಯಾಧೀಶರಾದ ಶ್ರೀ ಕೃಷ್ಣಮೂರ್ತಿ ಏನ್ ರವರು ಭಾಗವಹಿಸಿದರು. ಕಾರ್ಯಕ್ರಮದಲ್ಲಿ ಅಧಿವಕ್ತ ಪರಿಷತ್ ಬಂಟ್ವಾಳ ಘಟಕದ ಅಧ್ಯಕ್ಷರಾದ ಉಮಾ ಏನ್ ಸೋಮಯಾಜಿ ಉಪಸ್ಥಿತರಿದ್ದರು.

ವಕೀಲರ ಸಂಘ (ರಿ), ಬಂಟ್ವಾಳ ಇದರ ಅಧ್ಯಕ್ಷರಾದ ಶ್ರೀ ರಿಚರ್ಡ್ ಕೊಸ್ತಾ ಎಂ ರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ವಕೀಲರ ಸಂಘ (ರಿ), ಬಂಟ್ವಾಳ ಇದರ ಹಿರಿಯ ಕಿರಿಯ ವಕೀಲರು ಹಾಜರಿದ್ದರು. ವೀರೇಂದ್ರ ಎಂ ಸಿದ್ದಕಟ್ಟೆ ಕಾರ್ಯಕ್ರಮ ನಿರೂಪಿಸಿದರು.

- Advertisement -

Latest News

error: Content is protected !!