Thursday, June 4, 2026
Homeಉತ್ತರ ಕನ್ನಡಶಿರೂರು ಗುಡ್ಡ ಕುಸಿತ ಪ್ರಕರಣ: ಅರ್ಜುನ್ ಲಾರಿ ಗಂಗಾವಳಿ ನದಿಯಲ್ಲಿ ಪತ್ತೆ

ಶಿರೂರು ಗುಡ್ಡ ಕುಸಿತ ಪ್ರಕರಣ: ಅರ್ಜುನ್ ಲಾರಿ ಗಂಗಾವಳಿ ನದಿಯಲ್ಲಿ ಪತ್ತೆ

- Advertisement -
- Advertisement -

ಉತ್ತರ ಕನ್ನಡ : ಸತತ ಎಂಟು ದಿನಗಳ ನಂತರ ಸೇನಾ ಪಡೆಗಳ ಹಗಲಿರುಳು ರಕ್ಷಣಾ ಕಾರ್ಯ ದಿಂದಾಗಿ ಗುಡ್ಡ ಕುಸಿತ ದುರಂತದಲ್ಲಿ ನಾಪತ್ತೆಯಾಗಿದ್ದ ಲಾರಿ ಇದೀಗ ಗುಡ್ಡದ ಮುಂಭಾಗದಲ್ಲಿರುವ ಗಂಗಾವಳಿಯಲ್ಲಿರುವುದು ಪತ್ತೆಯಾಗಿದೆ.

ಶಿರೂರು ಗುಡ್ಡ ಕುಸಿತ ದುರಂತದಲ್ಲಿ ಒಟ್ಟು ಹತ್ತು ಜನರು ಮೃತಪಟ್ಟಿದ್ದು, ಈ ಪೈಕಿ ಕಾರ್ಯಾಚರಣೆ ಮೂಲಕ ಈವರೆಗೆ ಎಂಟು ಜನರ ಮೃತದೇಹಗಳನ್ನು ಪತ್ತೆ ಮಾಡಲಾಗಿದೆ.

ಇದೀಗ ಕಂದಾಯ ಸಚಿವ ಕೃಷ್ಣಬೈರೇಗೌಡ ಅವರೇ ಟ್ವೀಟ್ ಮಾಡಿ, ನಾಪತ್ತೆಯಾಗಿದ್ದ ಅರ್ಜುನ್ ಅವರ ಟ್ರಕ್ ಗಂಗಾವಳಿಯಲ್ಲಿ ಪತ್ತೆಯಾಗಿರುವ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ದುರಂತ ಸಂಭವಿಸಿದ ಎಂಟು ದಿನಗಳು ಕಳೆದ ಬಳಿಕ ಟ್ರಕ್ ಪತ್ತೆಯಾಗಿದ್ದು, ಕಾರ್ಯಚರಣೆ ತೀವ್ರಗೊಂಡಿದೆ.

ಇನ್ನು ಲಾರಿ ಚಾಲಕ ಅರ್ಜುನ್ ಲಾರಿನಲ್ಲಿಯೇ ಸಿಲುಕಿಕೊಂಡಿದ್ದಾರಾ ಅಥವಾ ನದಿಯಲ್ಲಿ ಕೊಚ್ಚಿ ಹೋಗಿದ್ದಾರಾ ಎನ್ನುವ ಮಾಹಿತಿ ತಿಳಿದುಬಂದಿಲ್ಲ.  ಸದ್ಯಕ್ಕೆ ನದಿಯಿಂದ ಟ್ರಕ್​ ಮೇಲೆತ್ತುವ ಕಾರ್ಯ ಭರದಿಂದ ಸಾಗಿದೆ ಎಂದು ತಿಳಿದು ಬಂದಿದೆ. 

- Advertisement -

Latest News

error: Content is protected !!