Thursday, June 4, 2026
Homeಕರಾವಳಿಮಂಗಳೂರುಮಂಗಳೂರು: ಫಲ್ಗುಣಿ ನದಿ ನೀರು ನುಗ್ಗಿ ಮೊಗೇರ್ ಕುದ್ರು ಗ್ರಾಮ ಜಲಾವೃತ

ಮಂಗಳೂರು: ಫಲ್ಗುಣಿ ನದಿ ನೀರು ನುಗ್ಗಿ ಮೊಗೇರ್ ಕುದ್ರು ಗ್ರಾಮ ಜಲಾವೃತ

- Advertisement -
- Advertisement -

ಮಂಗಳೂರು: ಮಳೆ ನೀರಿನಿಂದಾಗಿ ಮಂಗಳೂರಿನ ಮೊಗೇರ್ ಕುದ್ರು ಗ್ರಾಮ ಸಂಪೂರ್ಣ ಜಲಾವೃತವಾಗಿದ್ದು ಕೃಷಿ ಭೂಮಿಗೆ ಫಲ್ಗುಣಿ ನದಿ ನೀರು ನುಗ್ಗಿದೆ.

ಸುಮಾರು ಸಾವಿರದಷ್ಟು ಹೆಚ್ಚು ಎಕರೆ ಪ್ರದೇಶದ ಕೃಷಿ ಭೂಮಿಗೆ ಹಾನಿ ಸಂಭವಿಸಿದ್ದು, ಅಡಿಕೆ, ತೆಂಗು, ಭತ್ತ ಮತ್ತು ಬಾಳೆ ಸೇರಿದಂತೆ ಬೆಳೆಗಳು ನಾಶವಾಗಿವೆ.

ಕೃಷಿ ಭೂಮಿ ನದಿಯಂತೆ ಕಾಣಿಸುತ್ತಿದ್ದು, ಮೊಗೇರ್ ಕುದ್ರು ಗ್ರಾಮಕ್ಕೆ ರಸ್ತೆ ಸಂಪರ್ಕವೇ ಇಲ್ಲದಂತಾಗಿದೆ. ದೋಣಿ ಮೂಲಕವೇ ಅಪಾಯದ ಸ್ಥಿತಿಯಲ್ಲಿ ಗ್ರಾಮಸ್ಥರು ಸಂಚಾರ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ನದಿ ನೀರು ನುಗ್ಗಿದ ಕಾರಣ ಮೂವತ್ತಕ್ಕೂ ಹೆಚ್ಚು ಮನೆಗಳು ಮುಳುಗಡೆಯಾಗಿ ಗದ್ದೆ ಮತ್ತು ರಸ್ತೆಗಳಲ್ಲಿ ನೀರು ತುಂಬಿಕೊಂಡಿವೆ.

ಮನೆಯಂಗಳದಲ್ಲಿ ಕೂಡಾ ನೀರು ತುಂಬಿಕೊಂಡಿರುವ ಕಾರಣ ಜಾನುವಾರುಗಳು ಕೂಡಾ ಸಂಕಷ್ಟ ಎದುರಿಸುವಂತಾಗಿದೆ.

ಫಲ್ಗುಣಿ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಕಿಂಡಿ ಅಣೆಕಟ್ಟಿನ ಅವೈಜ್ಞಾನಿಕ ಕಾಮಗಾರಿ ಮತ್ತು ಎಮರ್ಜೆನ್ಸಿ ಗೇಟ್ ಅಳವಡಿಸದೇ ಇರುವ ಕಾರಣ ಈ ಸಮಸ್ಯೆ ಸೃಷ್ಟಿಯಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

- Advertisement -

Latest News

error: Content is protected !!