Friday, July 4, 2025
Homeಕರಾವಳಿಬೆಳ್ತಂಗಡಿ: ರಸ್ತೆಗೆ ಮರ ಬಿದ್ದು ಸಂಚಾರಕ್ಕೆ ಅಡ್ಡಿ, ಸಾಮಾನ್ಯರಂತೆ ರಸ್ತೆಯಲ್ಲಿ ಕಾದ ಶಾಸಕ ಸುನೀಲ್ ಕುಮಾರ್

ಬೆಳ್ತಂಗಡಿ: ರಸ್ತೆಗೆ ಮರ ಬಿದ್ದು ಸಂಚಾರಕ್ಕೆ ಅಡ್ಡಿ, ಸಾಮಾನ್ಯರಂತೆ ರಸ್ತೆಯಲ್ಲಿ ಕಾದ ಶಾಸಕ ಸುನೀಲ್ ಕುಮಾರ್

spot_img
- Advertisement -
- Advertisement -

ಬೆಳ್ತಂಗಡಿ: ಮಂಗಳೂರು- ಚಿಕ್ಕಮಗಳೂರು ರಾಷ್ಟ್ರೀಯ ಹೆದ್ದಾರಿ 73ರ ಮುಂಡಾಜೆಯ ಸೋಮಂತಡ್ಕ ಸಮೀಪದ ಅಂಬಡ್ತ್ಯಾರು ಎಂಬಲ್ಲಿ ರಸ್ತೆಗೆ ಬೃಹದಾಕಾರದ ಮರಬಿದ್ದ ಕಾರಣ ಸುಮಾರು 2 ಗಂಟೆಗಳ ಕಾಲ ರಸ್ತೆಯಲ್ಲಿ ಸಂಚಾರ ಸ್ಥಗಿತಗೊಂಡ ಘಟನೆ ಇಂದು ಬೆಳಿಗ್ಗೆ ನಡೆದಿದೆ.

ಇಂದು ಮುಂಜಾನೆ ಸುಮಾರಿಗೆ 6.45ರ ಸುಮಾರಿಗೆ ರಸ್ತೆಗೆ ಅಡ್ಡಲಾಗಿ ಮರ ಉರುಳಿ ಬಿದ್ದಿದೆ. ಮರಬಿದ್ದ ಕಾರಣ ಕೆಲವು ವಾಹನಗಳು ಬದಲಿ ಗುಂಡಿ ರಸ್ತೆಯಲ್ಲಿ ಸಂಚಾರ ಮುಂದುವರಿಸಿದವು. ಮರ ರಸ್ತೆಗೆ ಉರುಳಿರುವುದರಿಂದ ವಿದ್ಯುತ್ ತಂತಿಗಳಿಗೆ ಹಾನಿಯಾಗಿದೆ.

ಸೋಮಂತಡ್ಕ: ರಸ್ತೆಗೆ ಮರ ಬಿದ್ದು ಸಂಚಾರಕ್ಕೆ ಅಡ್ಡಿ, ಸಾಮಾನ್ಯರಂತೆ ರಸ್ತೆಯಲ್ಲಿ ಕಾದ ಶಾಸಕ ಸುನೀಲ್ ಕುಮಾರ್

Posted by Maha Xpress on Wednesday, 8 July 2020

ರಸ್ತೆಯಲ್ಲೇ ಬಾಕಿಯಾದ ಶಾಸಕ ಸುನಿಲ್ ಕುಮಾರ್
ಇದೇ ರಸ್ತೆಯ ಮೂಲಕ ಬೆಂಗಳೂರಿಗೆ ಸಂಚರಿಸುತ್ತಿದ್ದ ಕಾರ್ಕಳ‌ ಶಾಸಕ ಸುನೀಲ್ ಕುಮಾರ್ ಕೂಡಾ ರಸ್ತೆಗೆ ಮರ ಬಿದ್ದ ಕಾರಣ ಸಮಸ್ಯೆಗೆ ಸಿಲುಕಿಕೊಂಡರು.

ಸುನೀಲ್ ಕುಮಾರ್ ಅವರು ಸ್ಥಳೀಯ ಶಾಸಕ ಹರೀಶ್ ಪೂಂಜಾರ ನೆರವಿನಿಂದ ಅರಣ್ಯ ಇಲಾಖೆ ಸಿಬಂದಿಗಳನ್ನು ಕರೆಸಿ ಮರಗಳನ್ನು ಮರ ತೆರವು ಮಾಡಿಸಿದರು.

ವಾಹನ ದಟ್ಟಣೆ ಕಡಿಮೆ ಇರುವ ಕಾರಣ ದೊಡ್ಡ ಮಟ್ಟದಲ್ಲಿ ಯಾವುದೇ ಸಮಸ್ಯೆಯಾಗಿಲ್ಲ ಎನ್ನಲಾಗಿದೆ.

- Advertisement -
spot_img

Latest News

error: Content is protected !!