Thursday, June 4, 2026
Homeತಾಜಾ ಸುದ್ದಿಕ್ಷುಲಕ ಕಾರಣಕ್ಕೆ ಜಗಳ, ವ್ಯಕ್ತಿಯ ಮೇಲೆ ಜೆಸಿಬಿಯಿಂದ ಹಲ್ಲೆ ನಡೆಸಿದ ಡ್ರೈವರ್

ಕ್ಷುಲಕ ಕಾರಣಕ್ಕೆ ಜಗಳ, ವ್ಯಕ್ತಿಯ ಮೇಲೆ ಜೆಸಿಬಿಯಿಂದ ಹಲ್ಲೆ ನಡೆಸಿದ ಡ್ರೈವರ್

- Advertisement -
- Advertisement -

ತೆಲಂಗಾಣ : ನಾವೆಲ್ಲಾ ಕ್ರೂರ ಮೃಗಗಳು ಎಂದರೆ ಯಾವುವು ಅಂತಾ ಕೇಳಿದ್ರೆ ಹುಲಿ, ಸಿಂಹ, ಹೀಗೆ ಪ್ರಾಣಿಗಳ ಹೆಸರುಗಳನ್ನು ಹೇಳುತ್ತೇವೆ. ಆದರೆ ಮನುಷ್ಯನಷ್ಟು ಕ್ರೂರಿ ಮತ್ತೊಬ್ಬನಿಲ್ಲ ಅನ್ನೋದನ್ನು ಹೇಳುವ ಘಟನೆಗಳು ಪದೇ ಪದೇ ನಡೆಯುತ್ತಲೇ ಇರುತ್ತವೆ. ಅಂತಹದ್ದೇ ಘಟನೆ ತೆಲಂಗಾಣದಲ್ಲಿ ನಡೆದಿದೆ.

ವ್ಯಕ್ತಿಯೋರ್ವನ ಮೇಲೆ ಜೆಸಿಬಿಯಿಂದಲೇ ಅದರ ಡ್ರೈವರ್​​ ದಾಳಿ ನಡೆಸಿರುವ ಅಮಾನವೀಯ ಘಟನೆ ತೆಲಂಗಾಣದ ಕೆಂಪಾಲಪುರ್​ ಗ್ರಾಮದಲ್ಲಿ ನಡೆದಿದೆ. ಅದರ ವಿಡಿಯೋ ಇದೀಗ ವೈರಲ್​ ಆಗಿದೆ. ಗ್ರಾಮದಲ್ಲಿನ ಪಾರ್ಕ್​ನಲ್ಲಿ ಜೆಸಿಬಿ ಕೆಲಸ ನಡೆಸುತ್ತಿದ್ದ ವೇಳೆ ಸೂರ್ಯ ಎಂಬ ವ್ಯಕ್ತಿ ಜೆಸಿಬಿ ಡ್ರೈವರ್​ಗೆ ಬೈದಿದ್ದಾನೆ. ಇದರಿಂದ ಆಕ್ರೋಶಗೊಂಡ ಆತ ಜೆಸಿಬಿಯಿಂದಲೇ ವ್ಯಕ್ತಿ ಮೇಲೆ ಹಲ್ಲೆ ನಡೆಸಿದ್ದಾನೆ. ಘಟನೆಯಿಂದ ಗಾಯಗೊಂಡಿರುವ ವ್ಯಕ್ತಿಯನ್ನ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಆರೋಪಿಯ ಬಂಧಿಸಲಾಗಿದೆ.

- Advertisement -

Latest News

error: Content is protected !!