Wednesday, June 3, 2026
Homeಕರಾವಳಿಮಣ್ಣಿನಲ್ಲಿ ಸಿಲುಕಿದ ವ್ಯಕ್ತಿಯೋರ್ವನ ರಕ್ಷಣೆ

ಮಣ್ಣಿನಲ್ಲಿ ಸಿಲುಕಿದ ವ್ಯಕ್ತಿಯೋರ್ವನ ರಕ್ಷಣೆ

- Advertisement -
- Advertisement -

ಸುಳ್ಯ: ತಾಲೂಕಿನ ಪಂಜದಲ್ಲಿ ಬಾವಿಯ ರಿಂಗ್‌ನ ಬದಿಗೆ ಮಣ್ಣು ತುಂಬಿಸುತ್ತಿದ್ದಾಗ ಮಣ್ಣಿನಲ್ಲಿ ವ್ಯಕ್ತಿಯೊಬ್ಬರು ಸಿಲುಕಿದ ಘಟನೆ ನಡೆದಿದ್ದು, ಕೂಡಲೇ ಸ್ಥಳದಲ್ಲಿದ್ದವರು ಅವರನ್ನು ರಕ್ಷಿಸಿದ ಘಟನೆ ಸಂಭವಿಸಿದೆ.

ಬಾವಿಯ ರಿಂಗ್‌ನ ಹೊರಗಿನ ಬದಿಗೆ ಮಣ್ಣು ತುಂಬುವ ಕೆಲಸವನ್ನು ಕೇರಳದ ಕಾರ್ಮಿಕರು ಪಂಜದ ಅಡ್ಡತ್ತೋಡು ಸಮೀಪ ಮನೆಯೊಂದರಲ್ಲಿ ನಿರ್ವಹಿಸುತ್ತಿದ್ದರು. ಆಗ ರಿಂಗ್‌ನ ಬದಿಯ ಮಣ್ಣು ಒಮ್ಮಿಂದೊಮ್ಮೆಲೆ ಕೆಳಕ್ಕೆ ಕುಸಿದಿದ್ದು, ಈ ವೇಳೆ ಓರ್ವ ಕಾರ್ಮಿಕ ಭುಜದ ವರೆಗೂ ಮಣ್ಣಿನಲ್ಲಿ ಹೂತು ಹೋಗಿದ್ದರು. ತತ್‌ಕ್ಷಣ ಅಲ್ಲಿದ್ದವರು ಮತ್ತು ಜೆಸಿಬಿ ಸಹಾಯದಿಂದ ಅವರ ಮೇಲಿಂದ ಮಣ್ಣು ತೆಗೆದು ಅವರನ್ನು ರಕ್ಷಿಸಿ ಅಂಬ್ಯುಲೆನ್ಸ್‌ನಲ್ಲಿ ಅವರನ್ನು ಸುಳ್ಯದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

- Advertisement -

Latest News

error: Content is protected !!